New Posts

recent

ಅಮೃತವಿತ್ತವಳಿಗೊಂದು ತುತ್ತು


ಜೈ ಜವಾನ್, ಜೈ ಕಿಸಾನ್!!!

1965ರ ಸಮಯ. ಒಂದೆಡೆ ದೇಶದಲ್ಲಿ ಕ್ಷಾಮ, ಮತ್ತೊಂದೆಡೆ ನೆರೆ ರಾಷ್ಟ್ರವಾದ ಪಾಕಿಸ್ತಾನದೊಂದಿಗೆ ಯುದ್ಧ. ಭಾರತ ಆಹಾರವನ್ನು ಆಮದು ಮಾಡಿಕೊಳ್ಳುತ್ತಿತ್ತು. ದೇಶದ ಅರ್ಥ ವ್ಯವಸ್ಥೆ ಯುದ್ಧವನ್ನೂ ಕ್ಷಾಮವನ್ನು ಸರಿದೂಗಿಸುವಷ್ಟು ಬಲವಾಗಿರಲಿಲ್ಲ. ಆಗ ಪ್ರಧಾನಿಯಾಗಿದ್ದ ಶಾಸ್ತ್ರಿಯವರು ಪ್ರಜೆಗಳಲ್ಲಿ ಕೇಳಿಕೊಂಡಿದ್ದಿಷ್ಟೇ, ಒಂದು ದಿನದ ಊಟ ಬಿಡಿ, ಅದು ದೇಶದ ಮೇಲಿನ ಹೊರೆ ತಗ್ಗಲು ಅನುಕೂಲವಾಗುತ್ತದೆ ಎಂದು.
ಅಂದು ದೇಶದ ರಕ್ಷಣೆಗೆ ಎಲ್ಲರೂ ಪಣತೊಟ್ಟು ಪ್ರಧಾನಿಗಳ ಮಾತಿನಂತೆ ಉಪವಾಸ ಆಚರಿಸಿದ್ದರು.
ಪ್ರಾಯಶಃ ಅದಾದನಂತರ ಒಂದು ಒಳ್ಳೆಯ ಕಾರ್ಯಕ್ಕಾಗಿ ಒಪ್ಪೊತ್ತಿನ ಊಟ ಬಿಡಲು ಕರೆ ನೀಡಿದ್ದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು.

ಸಾವಿರಾರು ಗೋವುಗಳಿಗೆ ಆಶ್ರಯವಾದ, ಕರ್ನಾಟಕ ರಾಜ್ಯದ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಳವಡಿಸಿರುವ ಬೇಲಿಯಿಂದಾಗಿ, ಬೆಟ್ಟದಲ್ಲಿ ಮೇವಿದ್ದರೂ, ಸರ್ಕಾರದಿಂದಾಗಿ ಆದ ಮೇವಿನ ಬರವನ್ನು ನೀಗಲು ನೀಡಿದ ಕರೆಯೇ #GiveUpAMeal.

ಈ ಕರೆಯ ಹಿನ್ನಲೆಯನ್ನು ಸ್ವಲ್ಪ ಅವಲೋಕಿಸೋಣ.
ಸರ್ಕಾರವು ಮಲೆ ಮಹದೇಶ್ವರ ಬೆಟ್ಟದಲ್ಲಿ ಹಸುಗಳು ಕಾಡಿನೊಳಗೆ ಹೋಗದಂತೆ ಬೇಲಿ ನಿರ್ಮಿಸಿ, ಅವುಗಳ ಪ್ರಾಕೃತಿಕ ಆಹಾರಕ್ಕೆ ಸರ್ಕಾರ ಅಡ್ಡಿಪಡಿಸಿತು. 
ಅಲ್ಲದೇ, ಕಳೆದೆರಡು ವರ್ಷದಿಂದ ಸರಿಯಾಗಿ ಮಳೆ ಇಲ್ಲದೇ, ರಾಜ್ಯಾದಂತ ಬರ ಬಂದಿರುವ ಕಾರಣ ಬೆಟ್ಟದ ಕೆಳಗೆ ಕೂಡ ಗೋವುಗಳಿಗೆ ಮೇವು ಸಿಗದಂತಾಯಿತು. ಹ್ಞಾ... ಇನ್ನೊಂದು, ಅಲ್ಲಿಯ ಗೋಪಾಲಕರು. ಮನೆಗೊಂದಾದರು ಗೋ ಇರುವುದು ಅಪರೂಪವಾಗಿರುವ ಈ ದಿನಗಳಲ್ಲಿ 100ಕ್ಕೂ ಹೆಚ್ಚು ಗೋವುಗಳನ್ನು ತಮ್ಮ ಮನೆ ಮಂದಿಯಂತೆ ನೋಡಿಕೊಳ್ಳುವವರು. ಅಲ್ಲದೇ ಅವರು ಗೋವಿನ ಹಾಲನ್ನು ಹಾಲನ್ನು ಉಪಯೋಗಿಸುವುದಿಲ್ಲ ಅವರ ಪ್ರಕಾರ ಅದಿರುವುದು ಕರುವಿಗಾಗಿ, ಅಗತ್ಯವಿದ್ದಲ್ಲಿ ಚಿಕ್ಕ ಮಕ್ಕಳಿಗೆ ಹಾಗೂ ಬಾಳಂತಿಯರಿಗಾಗಿ ಬಳಸಿಕೊಳ್ಳುತ್ತಾರೆ ವಿನಃ ಬೇರೆ ಯಾವುದೇ ಕೆಲಸಗಳಿಗೆ ಉಪಯೋಗಿಸಲಾರರು. ಈ ಬರದಿಂದಾಗಿ ಪ್ರಾಣ ಕಳೆದುಕೊಂಡ ಗೋವುಗಳ ಸಂಖ್ಯೆ ಬೆರಳೆಣಿಕೆಯಲ್ಲಿ ಮುಗಿಯದು. ಒಬ್ಬೊಬ್ಬ ಗೋಪಾಲಕರೂ 10ಕ್ಕೂ ಹೆಚ್ಚು ಗೋವುಗಳನ್ನು ಕಳೆದುಕೊಂಡರು. ಮನೆ ಮಂದಿಯನ್ನು ಕಳೆದುಕೊಂಡಂತಹ ದುಃಖ ಒಂದೆಡೆಯಾದರೆ, ಹಸಿವಿನಿಂದ ಬಳಲುತ್ತಿರುವ ಗೋವುಗಳು ಇನ್ನೊಂದೆಡೆ. ಹೀಗಾಗುತ್ತಿದ್ದರೆ, ಸರ್ಕಾರಕ್ಕಿಂತ ಕಾಡುಗಳ್ಳರೇ ವಾಸಿ ಎನ್ನುವಷ್ಟರಮಟ್ಟಿಗೆ ಅವರ ಅಭಿಪ್ರಾಯಗಳು ಬಂದವು. 

ಸರಿ, ದೇಸಿ ತಳಿಯ ಗೋವುಗಳನ್ನು ಹೇಗಾದರೂ ಮಾಡಿ ಉಳಿಸಲೇ ಬೇಕೆಂದು ಪಣತೊಟ್ಟ ಶ್ರೀಮಠವು ಮೇವು ನೀಡುವ ಕಾರ್ಯಕ್ಕೆ ಅಣಿಯಾಯಿತು. ರಾಜ್ಯಾದ್ಯಂತ ಮೇವು ಸಂಗ್ರಹಿಸಲು ಸುರು ಮಾಡಿತು. ಗೋಕಿಂಕರರೆಲ್ಲರು ಒಂದಾದರು. ಮೇವು ಸಂಗ್ರಹಿಸಿದರು, ಬೆಟ್ಟದ ಗೋವುಗಳಿಗೆ ಹಂಚಲು ಸುರು ಮಾಡಿದರು.
ಹೆತ್ತ ತಾಯಿಗಿರುವಷ್ಟೇ ಮಹತ್ವವನ್ನು ನಮ್ಮ ಸಂಸ್ಕೃತಿ ಗೋವಿಗೆ ನೀಡಿದೆ. ತಾಯಿಗೆ ಊಟ ನೀಡದೇ ನಾವು ಉಂಡರೆ ನಮ್ಮ ಊಟ ನಮಗೆ ಹಿಡಿಸೀತೇ? ಹೀಗೆ ಬಂದ ಪರಿಕಲ್ಪನೆ #GiveUpAMeal. ಅಂದರೆ ಬೇಸಿಗೆಯ ಈ 3 ತಿಂಗಳು ನಮ್ಮ ವಾರದ ಒಂದು ಊಟವನ್ನು ನಾವು ಗೋವಿಗೆ ನೀಡುವುದು. ಹಾಗೆಯೇ ನಮ್ಮ ದೈನಂದಿನ ವ್ಯವಹಾರವನ್ನು ಸರಳಗೊಳಿಸಿ, ಸರಳಜೀವನ-ಸರಳಭೋಜನ ಎಂಬ ಸೂತ್ರದೊಂದಿಗೆ ಉಳಿತಾಯ ಮಾಡಿ, ಗೋಪ್ರಾಣಾಭಿಕ್ಷಾ ದ ಮೂಲಕ ಗೋಸೇವೆಗೆ ನೀಡುವುದು. ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಇದಕ್ಕೆ ಸ್ಪಂದಿಸಿದ ಪರಿ ಅದ್ಭುತ. ಮೇವು ಸಂಗ್ರಹಣೆಯಲ್ಲಿ, ಮೇವು ವಿತರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಹಲವರಾದರೆ, ತಮ್ಮ ಚಟಗಳನ್ನು ಬಿಟ್ಟು, ತಮ್ಮಲ್ಲಿದ್ದ ಅನವಶ್ಯಕ ವಸ್ತುಗಳನ್ನು ಮಾರಿ, ತಮ್ಮ ಆಡಂಬರದ ಜೀವನಕ್ಕೆ ಕಡಿವಾಣ ಹಾಕಿ, ತಮ್ಮ ಕೈಲಾದ ಸಹಾಯ ಮಾಡಿದವರು ಇನ್ನು ಹಲವರು. 
ಇಷ್ಟಕ್ಕೆ ಸುಮ್ಮನಾಗದೆ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂಚಲನ ಸೃಷ್ಟಿಸುತ್ತಾ, ಎಲ್ಲರ ಗಮನ ಸೆಳೆಯುತ್ತ, ಅವರನ್ನೆಲ್ಲಾ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಪ್ರೇರೇಪಣೆ ನೀಡಿದವರೂ ಇದ್ದಾರೆ.
ಹಾಲು ಕುಡಿದಷ್ಟು ಸಂತಸವಾಯಿತು ಎನ್ನುವ ಗಾದೆಯಲ್ಲಿ ಹಾಲು ಯಾವ ರೀತಿಯ ಆಹಾರ ಎನ್ನುವುದು ತಿಳಿಯುತ್ತದೆ. ಇಂತಹ ಹಾಲನ್ನು ನೀಡುವ ಗೋಮಾತೆಯ ವಂಶ ಅಳಿದರೆ, ಹಾಲು ಇನ್ನೆಲ್ಲಿ.

ಇನ್ನೇಕೆ ತಡ? ಸುಮಾರು 70000 ಗೋವುಗಳಿಗೆ ಮೇವು ಒದಗಿಸುವ ಈ ಕಾರ್ಯಕ್ಕೆ ನಾವೂ ಕೈಜೋಡಿಸೋಣ, ಉಳಿದವರಿಗೂ ಪ್ರೇರೇಪಿಸೋಣ. ಅಲ್ಲವೇ?

Details for Donation

(Donations to KAMADUGHA are exempted under 80G section)

Bank Details:

Kamadugha
A/c # 0992500101611901, 
IFSC: KARB0000099 
Karnataka Bank, Srinagar Branch, Bengaluru

Payment through UPI/BHIM possible:
"account + IFSC" method


Donors are requested to send across Donor’s name, Postal Address, Transaction details, Amount and contact number to gounidhi@srisamsthana.org for issuing receipts.

-ಕಾರ್ತಿಕ್ ಮಾಬಲಡ್ಕ
ಅಮೃತವಿತ್ತವಳಿಗೊಂದು ತುತ್ತು Reviewed by Unknown on 08:49:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.