New Posts

recent

About

|| ಹರೇರಾಮ ||
ವಿದ್ಯಾರ್ಥಿ ವಾಹಿನೀ

ಮಾನವನ ಜೀವನದಲ್ಲಿ ವಿದ್ಯಾಭ್ಯಾಸವೆಂಬುದು ಬಹುಮುಖ್ಯ ಅಂಗ.
     ವ್ಯಕ್ತಿಯೊಬ್ಬ ಹುಟ್ಟಿದಾಗಿನಿಂದ ಕೊನೆ ತನಕ ನಿತ್ಯವೂ ವಿದ್ಯಾರ್ಥಿಯೇ. ವಿದ್ಯೆಯು ಬದುಕಿಗೆ ಬೇಕಾದ ಜ್ಞಾನವನ್ನೀಯುತ್ತದೆ. ಜ್ಞಾನವು ಮನುಷ್ಯನನ್ನು ಧನಾತ್ಮಕ ಚಿಂತನೆಗಳಲ್ಲಿ ತೊಡಗಿಸುತ್ತದೆ. ಧನಾತ್ಮಕ ಚಿಂತನೆಗಳು ಮನುಷ್ಯನ ಶೀಲವನ್ನು ವೃದ್ಧಿಸುತ್ತದೆ. ವಿದ್ಯೆಯು ಮನುಷ್ಯನನ್ನು ಸಂಘಜೀವಿಯಾಗಿಸುವುದರೊಂದಿಗೆ ಸಮೂಹದಲ್ಲಿ ಏಕತೆಯನ್ನು ಮೂಡಿಸುತ್ತದೆ.
      ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ಮುಂದಾಳುಗಳು. ಜಗತ್ತಿನ ಎಷ್ಟೋ ಚಳುವಳಿಗಳೂ, ಘಟನೆಗಳು ವಿದ್ಯಾರ್ಥಿಗಳ ಚಿಂತನಾ ಫಲವಾಗಿ ಆರಂಭವಾಗಿ ಬೆಳೆದದ್ದನ್ನ ನಾವು ಕಾಣುತ್ತೇವೆ. ಸಮಾಜದ ಬೆಳವಣಿಗೆಯಲ್ಲಿ ವಿದ್ಯೆಯು ಬಹುಮುಖ್ಯ ಪಾತ್ರವಹಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಹಾಗಾಗಿ, ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣವಾದರೆ ಮುಂದಿನ ಸಮಾಜವೇ ಸರಿದಾರಿಯಲ್ಲಿ ನಡೆದಂತೆ.
      ಆದರೆ, ಇಂದು ಏನಾಗಿದೆ ?
      ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇದ್ದುದರಿಂದ ಆಟ, ಊಟ, ಪಾಠಗಳಿಗೆ ತಮ್ಮ ಸಹೋದರರು, ರಕ್ತ ಸಂಬಂಧಿಗಳು, ಕುಟುಂಬದವರು ಜೊತೆಗಿರುತ್ತಿದ್ದರು. ಎಲ್ಲಾ ನೋವು-ನಲಿವುಗಳಿಗೆ ಅವರೇ ಪರಸ್ಪರ ಕಿವಿಯಾಗುತ್ತಿದ್ದರು. ಆದರೆ, ಇಂದಿನ ಆಧುನಿಕ ಸಮಾಜದ ವಿಭಕ್ತ ಕುಟುಂಬ ಪದ್ಧತಿಯಿಂದಾಗಿ ಮಕ್ಕಳ ಜೊತೆಯಲ್ಲಿ ಮಕ್ಕಳಿಲ್ಲ. ಹೆತ್ತವರ ಹೊರತು ಬೇರೆ ಹಿರಿಯರಿಲ್ಲ. ಸುಖ ಸಂತೋಷಗಳನ್ನು ಹಂಚಲು, ನೋವು ನಲಿವುಗಳನ್ನು ತೋಡಿಕೊಳ್ಳಲು ಸಮಪ್ರಾಯದ ಮಿತ್ರರನ್ನು ಹುಡುಕುತ್ತಿರುತ್ತದೆ ಆ ಮಗುವಿನ ಮನಸ್ಸು.
     ಒಟ್ಟಿನಲ್ಲಿ ಕಲಿಯುವ ಮಗುವಿನೊಂದಿಗೆ ಸಮಯ ಕಳೆವ, ಸರಿಯಾದ ಸಮಾನ ವಯಸ್ಕ, ಸಮಾನ ಮನಸ್ಕ ಸಹಪಾಠಿಗಳ ಕೊರತೆ ಉಂಟಾಗುವಂತಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಮಾನಸಿಕವಾಗಿ ಒಬ್ಬಂಟಿತನಕ್ಕೆ ದೂಡಲ್ಪಡುವ ಸಾಧ್ಯತೆಯಿದೆ. ಈ ಒಬ್ಬಂಟಿತನವೇ ಮುಂದೆ ಖಿನ್ನತೆಯಾಗಿ ಪರಿವರ್ತನೆಗೊಂಡು ಹೊರ ಜಗತ್ತಿನ ಆಶೆ ಆಮಿಷಗಳಿಗೆ ಬಲಿಯಾಗುತ್ತಾರೆ. ಜೀವನದುದ್ದಕ್ಕೂ ಯಂತ್ರಗಳಂತೆ ನೈಜ ಬದುಕನ್ನು ಕಳೆದುಕೊಳ್ಳುತ್ತಿದ್ದೇವೆ. ಜೊತೆಗಿರುವ ಹಿರಿಯರೂ ಈ ವಿಚಾರಗಳನ್ನು ವೈಜ್ಞಾನಿಕವಾಗಿ ತಿಳಿಯಪಡಿಸುವಲ್ಲಿ ಎಡವುತ್ತಾರೆ. ಅಂತೆಯೇ, ಶಿಕ್ಷಣ ಪದ್ಧತಿ ಸುಧಾರಣೆಯಾಗಬೇಕಿದೆ. ಅಂಕಗಳು ಮಾತ್ರವಲ್ಲದೆ ಜ್ಞಾನವನ್ನು ಸಂಪಾದಿಸುವ ಶಿಕ್ಷಣದ ಅಗತ್ಯವಿದೆ.
       ಇದನ್ನು ಮನಗಂಡ ಶ್ರೀ ಶ್ರೀಗಳವರು ವಿದ್ಯಾರ್ಥಿಗಳನ್ನು ಒಂದುಗೂಡಿಸಿ ವಿದ್ಯಾರ್ಥಿವಾಹಿನಿಯೆಂಬ ಬೃಹತ್ ಶಕ್ತಿಯನ್ನಾಗಿಸಿ, ಸಮಾಜಕ್ಕೆ ಆಸ್ತಿಯಾಗಿಸಲು ಅನುಗ್ರಹಿಸಿದ್ದಾರೆ. ಜ್ಞಾನಾರ್ಜನೆ, ಧರ್ಮರಕ್ಷಣೆ ಹಾಗು ಸಮಾಜ-ಸಂಘಟನೆಯ ಮಜಲುಗಳಲ್ಲಿ ಈ ವಿದ್ಯಾರ್ಥಿವಾಹಿನಿಯು ತೊಡಗಿಸಿಕೊಳ್ಳಲಿದೆ. ಅಗಾಧವಾದ ಶಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಸಂಘಟಿತರಾದರೆ, ಸೂಕ್ತ ದಾರಿಯಲ್ಲಿ ತೊಡಗಿಸಿಕೊಂಡರೆ ಸಾಮಾಜಿಕವಾಗಿ ಅನೇಕ ಅದ್ಭುತವಾದ ಬದಲಾವಣೆಗಳನ್ನು ತರಲು ಸಾಧ್ಯ ಎಂಬುದು ನಿಸ್ಸಂಶಯ.



ಬನ್ನಿ, ವಿದ್ಯಾರ್ಥಿವಾಹಿನಿಯಲ್ಲಿ ಭಾಗವಹಿಸಿ.
ಸಂಘಟಿತರಾಗೋಣ, ಜ್ಞಾನಿಗಳಾಗೋಣ, ಭವ್ಯಸಮಾಜವನ್ನು ಕಟ್ಟೋಣ.
About Reviewed by FreeSV on 22:43:00 Rating: 5
Design and Developed by Vidyarthi Vahini

Contact Form

Name

Email *

Message *

Powered by Blogger.