New Posts

recent

ಶ್ರೀಕರಾರ್ಚಿತ ರಾಮ ದೇವರ ಪೂಜೆ

"ಜಗತ್ತಿಗೊಬ್ಬರೇ ಶಂಕರಾಚಾರ್ಯರು" 
"ಜಗತ್ತಿಗೊಂದೇ ಚಂದ್ರಮೌಳೀಶ್ವರ"
"ಜಗತ್ತಿಗೊಂದೇ ಶ್ರೀರಾಮಚಂದ್ರಾಪುರ ಮಠ"


ಹರೇ ರಾಮ. ಶ್ರೀಕರಾರ್ಚಿತ ರಾಮ ಪೂಜೆಯ ಬಗ್ಗೆ ನಾನು ಓದಿ,ಕೇಳಿ ತಿಳಿದುಕೊಂಡ ಕೆಲವು ವಿಷಯವನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.
ನಮಗೆಲ್ಲಾ ತಿಳಿದಿರುವಂತೆ ನಮ್ಮೆಲ್ಲರ ಪ್ರೀತಿಯ,ನಮ್ಮಲ್ಲರ ಕಷ್ಟವನ್ನು ದೂರಮಾಡಿ ನಗುಮೊಗದಿಂದ ಇರುವಂತೆ ಮಾಡುವ ,ನಮ್ಮೆಲ್ಲರ ಆರಾಧ್ಯ ದೇವರಾದ ಪ್ರಭು ಶ್ರೀರಾಮನಿಗೆ ನಡೆಯುವ ಶ್ರೀಕರಾರ್ಚಿತ ರಾಮ ದೇವರ  ಪ್ರಸಕ್ತ ಪೂಜೆ ಸಲ್ಲಿಸುವವರು  ರಾಮಚಂದ್ರಾಪುರ ಮಠದ "ಅವಿಚ್ಛಿನ್ನ ಪರಂಪರೆಯ ಪೀಠಾಧೀಶರಾದ  ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ".
ಆದಿಗುರು ಶ್ರೀಶಂಕರಾಚಾರ್ಯರು ೧೨೦೦ ವರ್ಷಗಳ ಹಿಂದೆ ಗೋಕರ್ಣದಲ್ಲಿ ಸ್ಥಾಪಿಸಿದ  ಪೀಠ(ಶ್ರೀರಘೂತ್ತಮ ಮಠ)ವೇ ನಮ್ಮ ಹೆಮ್ಮೆಯ ಶ್ರೀರಾಮಚಂದ್ರಾಪುರ ಮಠ ."ಇದು ಇಡೀ ಜಗತ್ತಿನಲ್ಲಿರುವ ಏಕೈಕ ಅವಿಚ್ಛಿನ್ನ ಪರಂಪರೆ"ಯಾಗಿದೆ. ಪ್ರಪಂಚದಲ್ಲಿಯೇ ಇನ್ನೊಂದಿಲ್ಲದ ಶ್ರೀ ಚಂದ್ರಮೌಳೀಶ್ವರ ಲಿಂಗ ಹಾಗೂ ಶ್ರೀರಾಮ ದೇವರ ಮೂರ್ತಿಯನ್ನು  ಪ್ರಪ್ರಥಮವಾಗಿ ಪೂಜಿಸಿದ ಅಗಸ್ತ್ಯ ಮುನಿಗಳು ಶಂಕರಾಚಾರ್ಯರಿಗೆ ನೀಡಿದರೆಂದು ಇತಿಹಾಸವಿದೆ.ಸಾವಿರಾರು ವರ್ಷಗಳಿಂದ ಒಂದು ದಿನವೂ ಬಿಡದೇ ದಿನದ ಎರಡೂ ಹೊತ್ತುಗಳಲ್ಲಿ ನಡೆಯುವ ಶ್ರೀಕರಾರ್ಚಿತ ಶ್ರೀರಾಮ ದೇವರ ಪೂಜೆಯನ್ನು ಮಾಡುವ ಅಧಿಕಾರ ಇರುವುದು ಕೇವಲ ಶ್ರೀ ರಾಮಚಂದ್ರಾಪುರ ಮಠದ ಪೀಠದ ಯತಿಗಳಿಗೆ ಮಾತ್ರ.
ಚಂದ್ರಮೌಳೀಶ್ವರ  ಲಿಂಗಗಳು ಹಲವಾರು. ಆದರೆ ಶ್ರೀ ರಾಮಚಂದ್ರಾಪುರದ ಮಠದ  ಚಂದ್ರಮೌಳೀಶ್ವರನಲ್ಲಿವೆ ವಿಶೇಷತೆಗಳು ಹಲವು.ಅಂತಹ ಇನ್ನೊಂದು ಚಂದ್ರಮೌಳೀಶ್ವರ ಬೇರೆಲ್ಲೂ ಇಲ್ಲ. ಇದು ಅನ್ವರ್ಥ ಚಂದ್ರಮೌಳೀಶ್ವರ.ಮೌಳೀ ಎಂದರೆ ಸರ್ವೋನ್ನತ ಸ್ಥಳ. ಈ ಚಂದ್ರಮೌಳೀಶ್ವರನ ಮೇಲ್ಭಾಗದಲ್ಲಿ  (ಮೌಳಿಯಲ್ಲಿ)ಚಂದ್ರನ ಕಲೆಯೊಂದಿದ್ದು ಆ ಕಲೆಯ ಕಾಂತಿಯು ಅಮವಾಸ್ಯೆ ಹಾಗೂ ಹುಣ್ಣಿಮೆಗೆ ಸರಿಯಾಗಿ ಬದಲಾವಣೆಯಾಗುತ್ತದೆ. ಹುಣ್ಣಿಮೆಯ ದಿನದಂದು ನಾವು ಜೇನಿನ ಬಣ್ಣವನ್ನು ಕಾಣಬಹುದು. ಅದರ ಮುಂಭಾಗದ ಪುರೋಭಾಗದಲ್ಲಿ ರಾಮನ ಆಳ್ವಿಕಯ ಪೂರ್ಣ ಭಾರತವರ್ಷ. ಹಾಗೂ ಅದರ ನಂತರ ಒಂದರೊಳಗೆ ಒಂದರಂತೆ ಅನಂತ ತ್ರಿಕೋಣಗಳು. ಆ ತ್ರಿಕೋಣದ ಮಧ್ಯೆ ಒಂದು ಸೂಕ್ಷ್ಮ ಬಿಂದುವನ್ನು ಕಾಣಬಹುದು.
ಚಂದ್ರಮೌಳೀಶ್ವರ ಲಿಂಗದ ಹಿಂಬಾಗದಲ್ಲಿ ಆತ್ಮಲಿಂಗವೇ ಆವಿರ್ಭವಿಸಿದೆ. ಇದು ಶ್ರೀಮಠ ಹಾಗೂ ಗೋಕರ್ಣ ಮಹಾಬಲೇಶ್ವರನಿಗೆ ಇರುವ ಸಂಬಂಧವನ್ನು ಸಾರಿ ತಿಳಿಸಿಕೊಡುತ್ತದೆ. ಈ ಚಂದ್ರಮೌಳೀಶ್ವರ ಲಿಂಗವನ್ನು ಅಪಹರಿಸಲು ಸಾಕಷ್ಟು ಪ್ರಯತ್ನಗಳು ಯುದ್ಧಗಳು ನಡೆದಿದ್ದವಾದರು ನಮ್ಮ ಮಠದಿಂದ ಅದನ್ನು ಯಾರಿಗೂ ಬೇರ್ಪಡಿಸಲು ಸಾಧ್ಯವಾಗಲಿಲ್ಲ.ಶ್ರೀರಾಮ ಲಕ್ಷಣ ಸಹಿತ ಸೀತಾ ಹನುಮಂತ, ಶ್ರೀ ಚಂದ್ರಮೌಳೀಶ್ವರ , ಶ್ರೀ ರಾಜರಾಜೇಶ್ವರಿ, ಶ್ರೀ ಚಕ್ರ ಮುಂತಾದವುಗಳು ಶ್ರೀಸಂಸ್ಥಾನದವರಿಂದ ನಿತ್ಯ ಪೂಜಿಸಲ್ಪಡುವ ದೇವರುಗಳು. ಸಾವಿರಾರು ಜನರ ಕಷ್ಟ,ದುಃಖ, ಕಲ್ಯಾಣ, ಸಂತಾನ, ವೈದ್ಯರಿಂದಲೂ ಗುಣಪಡಿಸಲಾಗದಂತಹ ಅನೇಕ ಸಮಸ್ಯೆಗಳನ್ನು ನಮ್ಮ ಮಠದ  ಪ್ರಭು ಶ್ರೀರಾಮ ಪರಿಹರಿಸಿದಂತಹ ವಿಷಯವಂತೂ ಸರ್ವೇ ಸಾಮಾನ್ಯವಾಗಿದೆ.
ಭಕ್ತರಿಗೆ ಅನೇಕಾನೇಕ ಪವಾಡಗಳು ಕಂಡು ಬಂದಿರುವುದು ಅತ್ಯಂತ ಸೋಜಿಗದ ಸಂಗತಿ ಎಂದೇ ಹೇಳಬಹುದು. ಶ್ರೀಕರಾರ್ಚಿತ ಪೂಜೆಯ ಹಾಗೂ ಆರತಿಯ ಸಂಧರ್ಭ ಕಂಡುಬಂದತಹ ಶ್ರೀರಾಮ ಬಂಟ ಹನುಮಂತನ ಛಾಯೆ, ಶ್ರೀರಾಮ ವಿಗ್ರಹದಲ್ಲಿ ಕಂಡು ಬಂದತಹ ನಮ್ಮೆಲ್ಲರ ಪ್ರೀತಿಯ ಶ್ರೀ ಸಂಸ್ಥಾನದವರ ಛಾಯೆ ಎಲ್ಲವೂ ನಮ್ಮ ಮಠದ, ರಾಮದೇವರ ಶ್ರೀಸಂಸ್ಥಾನದವರ ಶಕ್ತಿ ಹಾಗೂ ಪವಾಡಗಳನ್ನು ತೋರಿಸುತ್ತದೆ.
ಪ್ರಸಕ್ತ ಪೀಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು  ಪೀಠಾರೋಹಣ ಮಾಡಿದ ತರುವಾಯ ಸುಮಾರು ೧೫೦೦೦ ಬಾರಿ ಶ್ರೀರಾಮದೇವರ ಪೂಜೆ ಸಲ್ಲಿಸುತ್ತಿರುತ್ತಾರೆ. ಒಂದು ಗಂಟೆಗಳ ಕಾಲ ನಡೆಯುವ, ಪುಷ್ಪಾಲಂಕೃತಗೊಂಡ, ಕಣ್ಮನ ಸೆಳೆಯುವಂತಹ, ರುದ್ರ ಪಠಣ,ಧೂಪದಾರತಿ,ಪುಷ್ಪಾರ್ಚನೆ,ಪಂಚಾಭಿಷೇಕ ಮುಂತಾದವುಗಳನ್ನು ಒಳಗೊಂಡು ನಡೆಯುವಂತಹ  ಶ್ರೀರಾಮದೇವರ ಶ್ರೀಕರಾರ್ಚಿತ ಪೂಜೆಯನ್ನು ನೋಡುವ ಅವಕಾಶವನ್ನು ಶ್ರೀಶ್ರೀಗಳು ಶಿಷ್ಯರಿಗೆ ಮಾಡಿಕೊಟ್ಟಿದ್ದಾರೆ. ಇದನ್ನು ನೋಡುವುದೇ ಒಂದು ಪುಣ್ಯವಿದ್ದಂತೆ. ಎಲ್ಲಾ ಶ್ರೀಗುರುಭಕ್ತರಿಗೂ ಶ್ರೀಕರಾರ್ಚಿತ ಪೂಜೆಯನ್ನು ನೋಡುವ ಸೌಭಾಗ್ಯವನ್ನು ರಾಮದೇವರು ಕೊಡಲಿ.
ಹರೇ ರಾಮ
- ಚೈತ್ರ ಬೈಪದವು
ಶ್ರೀಕರಾರ್ಚಿತ ರಾಮ ದೇವರ ಪೂಜೆ Reviewed by Unknown on 20:31:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.