New Posts

recent

ಆಚಾರದ ವಿಚಾರ

ಆಚಾರದ ವಿಚಾರ

'ಆನು ಸುಳ್ಯ ಜಾತ್ರೆಗೆ ಹೋಗಿ ಬತ್ತೆ' ಹೇಳಿ ಹೊತ್ತೋಪಗ ೫.೩೦ಕ್ಕೆ ಅಪ್ಪನತ್ತರೆ ಹೇಳಿದೆ. ದೇವಸ್ಥಾನಕ್ಕೆ ಹೋಪದಲ್ಲ,c ಮಿಂದು ಜಪಮಾಡಿಕೊಂಬ ಹೇಳಿ ಮಿಂದಿಕ್ಕಿ, ಜಪ ಮುಗುಶಿ ಬಂದೆ. ದೇವಸ್ಥಾನಕ್ಕೆ ಹೆರಡ್ತಾ ಇಪ್ಪಗ ಅಪ್ಪ ಹೇಳಿದವು, 'ಇದಾ, ಮಿಂದಿಕ್ಕಿ ಎಂತೂ ತೆಕ್ಕೊಳ್ಳದೆ ಹೋಗೆಡ, ರಜ್ಜ ನೀರಾದರೂ ಕುಡುದಿಕ್ಕು'. ಅದೇ ಹೊತ್ತಿಂಗೆ ಅಮ್ಮ ಕಷಾಯ ಮಾಡಿದ್ದಿತ್ತು, ಕುಡುದಿಕ್ಕಿ ಸುಳ್ಯಕ್ಕೆ ಹೆರಟೆ.
ಬಸ್ಸಿಲಿ ಕೂದಿಕ್ಕಿ, 'ಮಿಂದಿಕ್ಕಿ ಅಂತೆ ಹೋಪಲಾಗ' ಹೇಳಿ ದೊಡ್ಡವ್ವು ಹೇಳುದೆಂತಕೆ, ಹೇಳಿ ವಿಚಾರ ಮಾಡಿದೆ. ಮೊದಲಾಣ ಕಾಲಲ್ಲಿ, ಮೂರು ಹೊತ್ತುದೆ, ಮಿಂದು, ಜಪ ಮಾಡುಗು ಹೇಳಿ ಅಜ್ಜಿ ಹೇಳಿದ್ದು ನೆಂಪಿಂಗೆ ಬಂತು, ಅಲ್ಲದೇ ಜಪ ಆದಿಕ್ಕಿ ಆಹಾರವ ತೆಕ್ಕೊಂಗು. ಉಂಡಿಕ್ಕಿ ಮೀವದು ಒಳ್ಳೆದಲ್ಲ ಹೇಳಿ ಎಲ್ಲರೂ ಹೇಳ್ತವು. ಆಹಾರ ತೆಕ್ಕೊಳ್ಳದೆ ಹೆರ ಹೋದರೆ, ತಲೆ ತಿರುಗುದು, ಬಚ್ಚುದು ಅಥವಾ ಇನ್ನೆಂತಾರು ಅಪ್ಪದು ಇರ್ತು. ಆಹಾರ ತೆಕ್ಕೊಂಬದು ಮಾಮೂಲಾಗಿ ಎಲ್ಲರು ದಿನಕ್ಕೆ ಮೂರು ಸರ್ತಿ, ಉದಿಯಪ್ಪಗ, ಮಧ್ಯಾಹ್ನ, ಇರುಳಪ್ಪಗ. ಒಟ್ಟಿಂಗೆ ಹೊತ್ತೊಪ್ಪಗ ಒಂದು ಚಾಯ ಕೂಡ ಇರ್ತು.
ಎಲ್ಲ ವಿಷಯಂಗಳ ನೋಡಿ, ಆನು ಲೆಕ್ಕ ಹಾಕಿದೆ, ಮೊದಾಲಣ ಕಾಲಾಲ್ಲಿ, ದೂರ ಹೋಪಗ, ಆಹಾರ ತೆಕ್ಕೊಂಗು. ಆಹಾರ ತೆಕ್ಕೊಳ್ಳೆಕ್ಕಾರೆ ಮಿಂದು ಜಪ ಮಾಡುಗು. ಇದು ಕ್ರಮೇಣ ಎಂತಾತು ಹೇಳಿರೆ ಮಿಂದು ಹೋವ್ತರೆ ಆಹಾರ ತೆಕ್ಕೊಳೆಕ್ಕು ಹೇಳಿ ಆತು ಹೇಳ್ತ ತೀರ್ಮಾನಕ್ಕೆ ಆನು ಬಂದಪ್ಪಗ, ಕಂಡೆಕ್ಟ್ರ ಅತ್ಲಾಗಿಂದ ಸುಳ್ಯ ಎತ್ತಿತು ಹೇಳಿತು. ಬಸ್ಸಿಂದ ಇಳುದು ಅಲ್ಲಿಂದ ಜಾತ್ರೆ ಸುತ್ತುಲೆ ಹೋದೆ.

ಕಾರ್ತಿಕ್ ಮಾಬಲಡ್ಕ  

ಆಚಾರದ ವಿಚಾರ Reviewed by Unknown on 09:05:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.