New Posts

recent

ಕ್ರೀಡೋತ್ಸವ -2016

ನೂರಾರು ಜನರ ಬಾಯಲ್ಲಿ ‘ಹರೇ ರಾಮ’ ಎಂಬ ಉದ್ಘೋಷ, ಬಿರು ಬಿಸಿಲಿಗೂ ಎದುರಾಗಿ ನಿಂತು ಕಾರ್ಯಕ್ರಮ ಸಂಘಟಿಸಿದ ಗುರು ಸೇವಕರು, ಮಕ್ಕಳಿಂದ ಹಿಡಿದು ಹಿರಿಯರವರೆಗೆ ಆಡಿ ನಲಿದ ಗುರು ಭಕ್ತರು.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದಗಳೊಂದಿಗೆ, ಪೆರಾಜೆಯ ರಾಮಚಂದ್ರಾಪುರ ಮಠದಲ್ಲಿ, ಪುತ್ತೂರಿನ ಹವ್ಯಕ ವಿದ್ಯಾರ್ಥಿ ವಾಹಿನಿ ಆಯೋಜಿಸಿದ ಕ್ರೀಡೋತ್ಸವದ ಒಂದಷ್ಟು ತುಣುಕುಗಳು.
ಕ್ರೀಡೆ ಒಗ್ಗಟ್ಟಿನ ಸಂಕೇತ. ಹಿರಿ ಕಿರಿಯ ಎಂಬ ಭೇದವಿಲ್ಲದೆ ಎಲ್ಲರೊಡಗೂಡಿ ಆಡುವ ಆ ಕ್ಷಣ ಚಿರಸ್ಮರಣೀಯ. ಇನ್ನು ಇಂತಹ ಕಾರ್ಯಕ್ರಮದ ಆಯೋಜನೆಯ ಅನುಭವವಂತೂ ಅದ್ಭುತ. ಆಯೋಜನೆಯ ತಂಡದಲ್ಲಿದ್ದ ನನ್ನ ಒಂದಷ್ಟು ನೆನಪುಗಳನ್ನ ನಿಮ್ಮ ಮುಂದಿಡುತ್ತೇನೆ.
ಶ್ರೀಗಳ ಆಶೀರ್ವಾದ, ಹಿರಿಯರ ಮಾರ್ಗದರ್ಶನದೊಂದಿಗೆ ಕಳೆದ ಒಂದು ತಿಂಗಳಿನಿಂದ ತಯಾರಿ ನಡೆಸುತ್ತಿದ್ದ ನಮ್ಮ ವಿದ್ಯಾರ್ಥಿ ವಾಹಿನಿಯ ಸದಸ್ಯರ ಒಗ್ಗಟ್ಟಿನ ಪ್ರತಿಫಲವೇ ಈ ಕ್ರೀಡೋತ್ಸವ.
ಒಂದು ಕಾರ್ಯಕ್ರಮದ ಯಶಸ್ಸು ಅದರ ಆಯೋಜಕರ ಪರಿಶ್ರಮದ ಮೇಲೆ ನಿರ್ಧರಿತವಾಗಿರುತ್ತದೆ. ಕ್ರೀಡಾಕೂಟದಂತಹ ಕಾರ್ಯಕ್ರಮಗಳ ಸಿದ್ಧತೆಯಲ್ಲಿ ದೈಹಿಕ ಪರಿಶ್ರಮವೇ ಪ್ರಮುಖವಾಗುತ್ತದೆ.
ಹಿಂದಿನ ಒಂದು ವಾರ ಮೈದಾನದಲ್ಲಿ ಅಹರ್ನಿಶಿಯಾಗಿ ಸಿದ್ಧತೆಯಲ್ಲಿ  ತೊಡಗಿಕೊಂಡ ನಮ್ಮ ತಂಡ, ಜೊತೆಗೆ ಒಳಾಂಗಣ ಆಟಗಳ ವಸ್ತುಗಳ ಸಂಗ್ರಹಣಾ ಕಾರ್ಯದಲ್ಲಿ ತೊಡಗಿಕೊಂಡೆವು. ಎಲ್ಲಾ ಪೂರ್ವ ಸಿದ್ಧತೆಯೊಂದಿಗೆ, ಕ್ರೀಡಾಕೂಟದ ದಿನ ಸರ್ವರ ಸಹಕಾರದೊಂದಿಗೆ ಇಡೀ ದಿನ ವಿವಿಧ ಸ್ಪರ್ಧೆಗಳು ಸುಸೂತ್ರವಾಗಿ ನಡೆದಾಗ ಎಲ್ಲರ ಮನದಲ್ಲಿ ದಣಿವೆಲ್ಲಾ ಕರಗಿಹೋಗಿ ಸಂತೋಷದ ಭಾವನೆ ಮೂಡಿತು.
ಕ್ರೀಡಾಕೂಟದ ಮೂಲಕ ಸಮಾಜದ ಗುರು ಭಕ್ತರನ್ನು ಒಗ್ಗೂಡಿಸಿ, ಅದರಲ್ಲೂ ಯುವಕರನ್ನ ಒಂದುಗೂಡಿಸುವ ಕನಸಿನೊಂದಿಗೆ ಆಯೋಜನೆಗೊಂಡ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರಿದಾಗ ನಮ್ಮೆಲ್ಲಾ ಸದಸ್ಯರ ಮನದಲ್ಲಿ ಧನ್ಯತಾಭಾವ ಮೂಡಿತು.
By: Murali Kadava
ಕ್ರೀಡೋತ್ಸವ -2016 Reviewed by FreeSV on 09:29:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.