New Posts

recent

ನಾ ಕಂಡ ಕ್ರೀಡೋತ್ಸವ ೨೦೧೬

ಹರೇ ರಾಮಾ🏻
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ  ಆಶೀರ್ವಾದಗಳೊಂದಿಗೆ, ಪೆರಾಜೆಯ ಮಾಣಿ   ಶ್ರೀ ರಾಮಚಂದ್ರಾಪುರ ಮಠದಲ್ಲಿ, ಪುತ್ತೂರಿನ ಹವ್ಯಕ ವಿದ್ಯಾರ್ಥಿ ವಾಹಿನಿ ಆಯೋಜಿಸಿದ ಕ್ರೀಡೋತ್ಸವದ ಆಯೋಜನೆಯಲ್ಲಿನ ನನ್ನ ಒಂದಷ್ಟು ಸವಿನೆನಪುಗಳನ್ನು  ನಿಮ್ಮ ಮುಂದೆ ಇಡಬಯಸುತ್ತೇನೆ.
ಬೆಳ್ಳಂಬೆಳಗ್ಗೆ ನಾವು ಸೇರಿದ್ದೆವು ಪರಾಜೆ ಮಾಣಿ ಮಠದಲ್ಲಿ. ನಾವಂದುಕೊಂಡಿದ್ದ., ಕಾಯುತ್ತಿದ್ದ ದಿನ ಎಪ್ರಿಲ್ ೨೪ ಬಂದೇ ಬಿಟ್ಟಿತ್ತು.. ಜನವರಿಯಲ್ಲಿ ಕ್ರೀಡೋತ್ಸವ ಮಾಡುವ ಕುರಿತಾದ ವಿಚಾರ ನಮ್ಮ ಹವ್ಯಕ ವಿದ್ಯಾರ್ಥಿವಾಹಿನಿಯ ಮುಖಂಡರ ತಲೆಗೆ ಬಂದಿತ್ತು.. ಅದರಂತೆ ಕ್ರೀಡೋತ್ಸವದ ಕುರಿತು ಅನೇಕ ಚರ್ಚೆಗಳನ್ನು ಮಾಡಿದ ನಂತರ ಮಾರ್ಚ್ ನಲ್ಲಿ ಬೆಂಗಳೂರು ಗಿರಿನಗರದ ರಾಮಶ್ರಮದಲ್ಲಿ ಶ್ರೀ ಸಂಸ್ಥಾನದವರಲ್ಲಿ ನಾವಂದುಕೊಂಡ ವಿಚಾರವನ್ನು ನಿವೇದಿಸಿಕೊಂಡಾಗ,  ಅತ್ಯಂತ ನಗುಮೊಗದಿಂದ ಕಾರ್ಯ ಸಿಧ್ದಿಯಾಗುವಂತೆ ಅನುಗ್ರಹ ಮಂತ್ರಾಕ್ಷತೆಯನ್ನು  ಕರುಣಿಸಿದರು.

ಅದರಂತೆ ಅತ್ಯಂತ ಚಿಕ್ಕದಾಗಿ ನಮ್ಮ ಕೆಲಸವನ್ನು ಪ್ರಾರಂಭ ಮಾಡಿದ ನಮಗೆ ದಿನಗಳು ಉರುಳಿ ಹೋದದ್ದು ತಿಳಿಯಲಿಲ್ಲ...." ನಮ್ಮ ಶ್ರೀಗಳಿಗೆ, ಶ್ರೀ ಗುರುಭಕ್ತರಿಗೆ  ದೊರೆತ ವಿಜಯವು ಮುಖ್ಯವಾಗಿ ನಮ್ಮಲ್ಲಿ ಹುರುಪನ್ನ ಇಮ್ಮಡಿಗೊಳಿಸಲು ಕಾರಣವಾಯಿತು"..ಅಂದಿನಿಂದ ವಿದ್ಯಾರ್ಥಿವಾಹಿನಿಯ ಹಿರಿಯ,ಕಿರಿಯ ಹಾಗೂ ಇನ್ನು ಕೆಲವು ಜನರು ಸೇರಿ ಕ್ರೀಡೋತ್ಸವಕ್ಕೆ ಸಂಬಂಧಿಸಿದ ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡೆವು.  ಕ್ರೀಡೋತ್ಸವದ ಹಿಂದಿನ ಒಂದು ವಾರವಂತು ಮಾಣಿಮಠವು ನಮಗೆಲ್ಲಾ ನಮ್ಮ ಸ್ವಂತ ಮನೆಯಂತೆ ಆಗಿಹೋಗಿತ್ತು ..ಮೈದಾನದಲ್ಲಿ ಬೆಳಗ್ಗಿನಿಂದ ಹಿಡಿದು ನಡು ರಾತ್ರಿಯಲ್ಲಿಯೂ ಮಾಡಿದ ಕೆಲಸವಂತು ನಮ್ಮ ಮನಸ್ಸಿಗೆ ಹುರುಪು ತಂದುಕೊಟ್ಟಿತ್ತು...ಕ್ರೀಡೆಗೆ ಬೇಕಾದ ಚಿಕ್ಕ ಚಿಕ್ಕ ವಿಷಯವು ನಮಗಂತು ದೊಡ್ಡ ವಿಷಯವೇ ಆಗಿತ್ತು... ಕ್ರೀಡೋತ್ಸವದ ಹಿಂದಿನ ದಿನದ ತನಕ ಎಲ್ಲರಮನಸ್ಸಿನಲ್ಲೂ ಒಂದು ರೀತಿಯ ತಳಮಳ. ಆದರೆ ಶ್ರೀಗುರುಗಳ ಆಶೀರ್ವಾದವು ನಮ್ಮಲ್ಲಿ ಧೈರ್ಯ ತುಂಬಿತ್ತು.
ನಾವು ಕಾಯುತ್ತಿದ್ದ ದಿನವಂತು ಬಂದೇ ಬಿಟ್ಟಿತ್ತು.. ಮಾಣಿಮಠದಲ್ಲಿ ಬೆಳಗ್ಗಿನ ಶ್ರೀರಾಮ ದೇವರ ಪೂಜೆಯಲ್ಲಿ ಎಲ್ಲರೂ ಒಟ್ಟು ಸೇರಿ ನಂತರ ಉರಿ ಬಿಸಿಲನ್ನೂ ಲೆಕ್ಕಿಸದೇ  ಗುರುವಂದನೆ ಸಲ್ಲಿಸಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ   ಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮಿ ಮಹರಾಜ್ ಕೀ ಜೈ ಎಂದು ಉಧ್ಗರಿಸುವಾಗ ಮೈರೋಮಾಂಚನವಾಯಿತು. ಬೆಳಗಿನಿಂದ ಸಂಜೆಯ ವರೆಗೆ ನಡೆದ ಕ್ರಿಕೆಟ್, `ಕಬಡ್ಡಿ ಪಂದ್ಯಾಟಗಳು,ಹಗ್ಗ ಜಗ್ಗಾಟ,  ಮಕ್ಕಳಿಂದ ಹಿಡಿದು ದೊಡ್ಡವರವರೆಗಿನ ಎಲ್ಲಾ ಚೆಸ್, ಕೇರಮ್, ಬ್ಯಾಡ್ ಮಿಂಟನ್ ಹಾಗೂ Super minutes ಆಟಗಳು ನೋಡುಗರ ಆಡುಗರ ಮನರಂಜಿಸಿದವು. ಆಟದಲ್ಲಿ ಗೆದ್ದಾಗ ಬರುತ್ತಿದ್ದ ಶ್ರೀಗುರುಗಳ ಪರ ಷೋಷಣೆಗಳು ಮನಸ್ಸಿಗೆ ಗೆಲುವು ನೀಡುತ್ತಿದ್ದವು.
ಅನೇಕ ರೀತಿಯ ಪೂರ್ವಸಿಧ್ದತೆಯೊಂದಿಗೆ, ಶ್ರೀಗಳ ಆಶೀರ್ವಾದ, ಗುರುಹಿರಿಯರ ಸಹಕಾರ ಮಾರ್ಗದರ್ಶನದೊಂದಿಗೆ, ಶ್ರೀ ಗುರುಭಕ್ತರ ಪ್ರತ್ಯಕ್ಷ. ಹಾಗೂ ಪರೋಕ್ಷವಾದ ಎಲ್ಲಾ ರೀತಿಯ ಸಹಕಾರದಿಂದ ಕ್ರೀಡೋತ್ಸವ ಯಶಸ್ವಿಯಾದಾಗ ಕುಟುಂಬದ ಒಂದು ಮಂಗಲಕಾರ್ಯ ಸುಸಂಪನ್ನವಾದಷ್ಟೇ ಮನದಲಿ ಸಂತಸ- ಸಂತೃಪ್ತಿ ಮೂಡಿತು. ಸಹಕರಿಸಿದಂತಹ ಎಲ್ಲರಿಗೂ ಹವ್ಯಕ ವಿದ್ಯಾರ್ಥಿವಾಹಿನಿಯ ಕಡೆಯಿಂದ ಧನ್ಯವಾದಗಳು🏻

- ಚೈತ್ರ ಬೈಪದವು
ನಾ ಕಂಡ ಕ್ರೀಡೋತ್ಸವ ೨೦೧೬ Reviewed by FreeSV on 22:16:00 Rating: 5

3 comments:

Design and Developed by Vidyarthi Vahini

Contact Form

Name

Email *

Message *

Powered by Blogger.