New Posts

recent

ನೆನಪು

ನೆನಪು

ನೆನಪಿನ ದೋಣಿಯದೋ ಸಾಗುತಿಹುದು

ನೀರ ಮೇಲಿನ ಪ್ರೀತಿ ತೋರುತಿಹುದು
ಅಂದು ನಾನೇರಿದ ಜೀವನದ ದೋಣಿ
ಇಂದಿಗೂ ಮುಂದಿಗೂ ಮುನ್ನುಗುತಿಹುದು

ಪುಟ್ಟ ಹೆಜ್ಜೆಯನಿಟ್ಟು ನಡೆದ ನೆನಪು

ನನ್ನ ಬಾಲ್ಯದ ಹನಿ ನೆನೆಪು
ಹೊರಲಾಗದ ಚೀಲವ ಹೊತ್ತು ಓಡಿ
ಶಾಲೆಯಲಿ ಬಿದ್ದ ಸಿಹಿ ನೆನಪು!
Playing Children

Photo Credit : Googl
ಆಟವಾಡುತ ಬಿದ್ದು ತಾಗಿಸಿಕೊಂಡು
ಜೋರಾಗಿ ಅತ್ತ ಕಹಿ ನೆನಪು !
ಯಾವುದೇ ಕೊಳೆ-ಕಲ್ಮಶವಿರದ ಮನದ
ವಯಸಿನ ಹಿಂದಿನ ನೆನಪು

ಪುಸ್ತಕದ ಹಿಂದೆಯೇ ಓದುತಿದ್ದ 

ಆ ಓದುವಾ ಕಾಲ ಹೈಸ್ಕೂಲ್ ಜೀವನ!
ಸಂಗೀತ ಕಲಿತು ಹಾಡುತ್ತಿದೆ
ಆ ದಿನಗಳ ಸುಂದರ ನೆನಪು!!

ಇದೀಗ ಕಾಲೇಜು ಸೇರಿ

ಮೊದಲಿನಂತಿರಲು ಪ್ರಯತ್ನಿಸುತ್ತಿರುವೆ
ತಪ್ಪುಗಳ ತಿದ್ದಲು ಹೊಣೆ ಹೊತ್ತಿರುವೆ
ಸಾಧಿಸುವ ಛಲ ಹೊತ್ತಿರುವೆ

ದೋಣಿಯದೋ ಸಾಗುತಲಿಹುದು

ಜೀವನ ಮುಂದೆ ನಡೆಯುತಲಿಹುದು
ನನ್ನ ಮುಂದಿನ ಪಯಣ ಹೀಗೆ
ಸಾಗುತಲಿಹುದು

-ಅರ್ಚನಾ ನೆಡ್ಲೆ
ನೆನಪು Reviewed by Unknown on 02:06:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.