New Posts

recent

ಮಂಗಲರಥದ ಪ್ರತಿರೂಪ


||ಹರೇರಾಮ||
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪರಿಕಲ್ಪನೆಯಲ್ಲಿ ನಾಡಿನ ಪರಮಪೂಜ್ಯ ಸಂತರ ನೇತೃತ್ವದಲ್ಲಿ  ಗೋಜಾಗೃತಿಗಾಗಿ ಸಪ್ತರಾಜ್ಯಗಳಲ್ಲಿ ಸಂಚರಿಸಿದ ಮಂಗಲಗೋಯಾತ್ರೆಯು ಮಂಗಳೂರಿನ ಕೂಳೂರು ಮಂಗಲಭೂಮಿಯಲ್ಲಿ ಸಹಸ್ರಾಧಿಕ ಸಂತರು,  ಲಕ್ಷಾಧಿಕ ಗೋಪ್ರೇಮಿಗಳು ಭಾಗವಹಿಸಿದ ಮಹಾಮಂಗಲ ಕಾರ್ಯಕ್ರಮ ದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡದ್ದು ಎಲ್ಲರಿಗೂ ತಿಳಿದೇ ಇದೆ. 
ದಶರಥಗಳನ್ನೊಳಗೊಂಡ ಮಂಗಲಗೋಯಾತ್ರೆಯ ಕೇಂದ್ರಾಕರ್ಷಣೆಯಾಗಿದ್ದದ್ದು ಮಂಗಲರಥ.  ಹಚ್ಚಹಸಿರು ಬಣ್ಣದ ರಥದಲ್ಲಿ ಶ್ವೇತವರ್ಣದ ಬೃಹತ್ ನಂದಿ ವಿಗ್ರಹ, ಪಕ್ಕದಲ್ಲಿ  ಧ್ವಜಸ್ಥಂಭದಲ್ಲಿ ರಾರಾಜಿಸುತ್ತಿದ್ದ ಮಂಗಲಧ್ವಜ ಇವಿಷ್ಟು  ಮಂಗಲರಥದ ಸ್ವರೂಪ. ಜನವರಿ ೨೭ರಂದು ನಮ್ಮ  ಪುತ್ತೂರಿನಲ್ಲಿ  ಮಂಗಲಗೋಯಾತ್ರೆಯು ಸಂಚರಿಸಿದಾಗ ವಾಹನಜಾಥಾದಲ್ಲಿ ನಾನೂ ಕೂಡ ಭಾಗವಹಿಸಿದ್ದೆ. ಆಗಲೇ ಮಂಗಲರಥದ ಒಂದು ಪ್ರತಿರೂಪ ತಯಾರಿಸಿಟ್ಟರೆ ಸದಾ ನೆನಪಿನಲ್ಲಿರುತ್ತದೆ ಎನ್ನುವ ಆಲೋಚನೆ ಮನದಲ್ಲಿ ಮೂಡಿತ್ತು. ಚಿಕ್ಕಂದಿನಿಂದ ಸಣ್ಣಪುಟ್ಟ ಮಾದರಿಗಳನ್ನು ತಯಾರಿಸುವುದರಲ್ಲಿ ಆಸಕ್ತಿ ಇದ್ದುದರಿಂದ ಮಂಗಲರಥದ ಪ್ರತಿರೂಪವನ್ನು ತಯಾರಿಸುವ ಮನಸ್ಸಾಯಿತು. ಫೋಮ್ ಬೋರ್ಡ್ ಬಳಸಿಕೊಂಡು ವಾಹನದ ರೂಪವನ್ನು ತಯಾರಿಸಿ ಅದಕ್ಕೆ ಸರಿ ಹೊಂದುವ ನಾಲ್ಕು ಚಕ್ರಗಳನ್ನು ಸೇರಿಸಿದಾಗ ರಥದ ಅರ್ಧ ಕೆಲಸ ಸಂಪೂರ್ಣಯಿತು. 
.ಕಾಗದದ ಹಾಳೆಗಳನ್ನು ನೀರಿನಲ್ಲಿ ಒಂದು ದಿನ ನೆನೆಸಿ ನಂತರ ನೀರನ್ನು ಸೋಸಿ ಅಂಟನ್ನು ಸೇರಿಸಿದಾಗ  ಒಂದು ಆವೆ ಮಣ್ಣಿನ ಹದಕ್ಕೆ ಬರುತ್ತದೆ. ಅದರಿಂದ ನಂದಿ ರೂಪವನ್ನು ತಯಾರಿಸಿದೆ. 
ಎಲ್.ಇ.ಡಿ ಬಲ್ಬ್ ಗಳು ಮತ್ತು ಅವುಗಳನ್ನು ನಿಯಂತ್ರಿಸಲು ಒಂದು ಸರ್ಕ್ಯೂಟನ್ನು ರಚಿಸಿ ರಥಕ್ಕೆ ಜೋಡಿಸಿ ನಂತರ ಸೂಕ್ತ ಬಣ್ಣ ಹಚ್ಚಿದಾಗ ರಥದ ಪ್ರತಿರೂಪ ಸಂಪೂರ್ಣವಾಗಿ ತಯಾರಾಯಿತು.  ಗುರುಗಳನ್ನು ನೆನೆದು ಪ್ರಾರಂಭಿಸಿದೆ. ಗುರುಗಳ ಆಶೀರ್ವಾದದಿಂದಲೇ ಇದೆಲ್ಲಾ ಸಾಧ್ಯವಾಯಿತು. ನಾನು  ತಯಾರಿಸಿದೆನೆಂಬ ಸಂತೃಪ್ತಿ ನನ್ನದಾಯಿತು.






-ಕೆ ಜಿ ಸುಬ್ರಹ್ಮಣ್ಯ ಭಟ್ 
ಮಂಗಲರಥದ ಪ್ರತಿರೂಪ Reviewed by Unknown on 22:31:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.