New Posts

recent

ಗೋಪ್ರಾಣಭಿಕ್ಷಾ

ಗೋಪ್ರಾಣಭಿಕ್ಷಾ

ಬೆಟ್ಟದ ಬೇಲಿಯು ಮುಳ್ಳಾಗಿರಲು
ಗೋವಿನ ಮೇವಿಗೆ ನರಕವಾಗಿರಲು
ಗೋಪ್ರೇಮಿಗಳ ಜೀವವೇದನೆಯಲಿರಲು
ಸಂಚಲಿಸಿತು "ಗೋವು-ಮೇವು-ನಾವು" ಒಕ್ಕೊರಲು    || 1 ||

ಬೆಟ್ಟದ ಮಾತೆಯ ನೋವಿನ ಸಂಕಟ
ತಲುಪಲೇ ಇಲ್ಲ ಸರ್ಕಾರದ ಪುಟ
ಗೋಪರಿವಾರರೂಪದಿ ಬಂದ ವೆಂಕಟ
ಗೋಪ್ರಾಣಭಿಕ್ಷೆಗೆ ಪಥವಾಯಿತು ರಾಮಚಂದ್ರಾಪುರಮಠ    || 2 ||

ಅಳಿಯುವ ಹಂತದಿ ಮಾತೆಯ ಮಡಿಲು
ಉಳಿಸುವ ಹಠದಿ ಗೋಪ್ರೇಮದ ಕಡಲು
ಗೋಜೀವದಿ ನವವಸಂತ ಮೂಡಲು
ಸರಳ ಭೋಜನ-ಸರಳ ಜೀವನಕೆ ನಮ್ಮೊಡಲು     || 3 ||

ಗೋವಿನ ನೋವಿಗೆ ಕರಗಿದ ದಣಿ
ಗೋಮೇವಿಗೆ ಚಿತ್ತೈಸಿದ ಸಂತರತ್ನಮಣಿ
ಕರುಣಾತೀತ ವಾತ್ಸಲ್ಯದ ಗಣಿ
ಶ್ರೀಗುರುಪೀಠಕೆ ಸದಾ ನಾ ಋಣಿ         || 4 ||

ಸಾವಿರದಷ್ಟು ಗೋವಿಗೆ ಸಾವಿರ ಟನ್ಗಳ ಮೇವು
ಸಾವಿರದ ಕರಗಳು ಬೇಡುತಿದೆ "ಗೋವಿಗಾಗಿ ನಾವು"
ಸಾಮಾಜಿಕ ಜಾಲತಾಣದಲಿ ಮೇವಿಗಾಗಿ ಅಕ್ಷರದ ಹರಿವು
ಅಕ್ಷಯವಾಗಲಿ ಗೋವಿಗಾಗಿ ತಮ್ಮದೆಲ್ಲವ ತ್ಯಾಗ ಮಾಡಿದ ಜೀವವು || 5 ||


ರಚನೆ:
ಪೂರ್ಣಾ ಹೆಗಡೆ ಕಪಾಸಿ
#GiveUpAMeal Team 
ಶ್ರೀರಾಮಚಂದ್ರಾಪುರಮಠ
ಗೋಪ್ರಾಣಭಿಕ್ಷಾ Reviewed by Unknown on 23:59:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.