New Posts

recent

ಗೋಶಾಲೆಯಲ್ಲಿ ವಿದ್ಯಾರ್ಥಿ ಸಂಗಮ

ಗೋಶಾಲೆಯಲ್ಲಿ ವಿದ್ಯಾರ್ಥಿ ಸಂಗಮ

ಬಜಕ್ಕೂಡ್ಳು ಅಮೃತಧಾರಾ ಗೋಶಾಲೆಯಲ್ಲಿ 24.12.2016 ರಂದು ಎಣ್ಮಕಜೆ ವಲಯದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವಾಹಿನಿ,ಬಿಂದುಸಿಂಧು,ಮುಷ್ಟಿಭಿಕ್ಷೆ,ಸಂಸ್ಕಾರ ಹಾಗೂ ಮಾತೃವಿಭಾಗದ ಸಂಯುಕ್ತ ಆಶ್ರಯದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ವಿಚಾರ ಸಂಕಿರಣಗಳು ನಡೆದವು.ಬೆಳಗ್ಗೆ 9 ಗಂಟೆಗೆ ವೇ|ಮೂ|ಕೇಶವಪ್ರಸಾದ ಭಟ್ ಕೂಟೇಲು ಇವರಿಂದ ಗೋಪೂಜೆ,9.30 ಕ್ಕೆಧ್ವಜಾರೋಹಣ,ಶಂಖನಾದ,ಗುರುವಂದನೆಯ ಅನಂತರ ಶ್ರೀ ಬಿ ಜಿ ರಾಮ ಭಟ್ ಅವರಿಂದ ಉದ್ಘಾಟನೆ ನಡೆಯಿತು.ಗಣೇಶ ಕುಮಾರ್ ಕುಂಚಿನಡ್ಕ ಧನ್ಯವಾದ ಇತ್ತರು.
ಲಘು ಉಪಹಾರದ ನಂತರ 10 ಘಂಟೆಯಿಂದ ವಿದ್ಯಾರ್ಥಿ ಗಳಿಗೆ ವಿವಿಧ ಸ್ಪರ್ಧೆಗಳು ನಡೆದವು.ಕಂಠಪಾಠ-ರಸಪ್ರಷ್ನೆ,ಭಾಷಣ,ದೇವರನಾಮ ಇತ್ಯಾದಿ ಸ್ಪರ್ಧೆಗಳು ನಡೆದವು.ಇವು ಐದು ವಿಭಿನ್ನ ವಿಭಾಗಗಳಲ್ಲಿ ನಡೆದವು

12 ಗಂಟೆಗೆ ಮುಷ್ಟಿಭಿಕ್ಷೆ ಹಾಗೂ ಬಿಂದುಸಿಂಧು ಯೋಜನೆಗಳ ಬಗ್ಗೆ ಸಾಕ್ಷ್ಯಚಿತ್ರಪ್ರದರ್ಶನ ನಡೆಯಿತು.
ಭೋಜನಾನಂತರ2.30 ಕ್ಕೆ ಸಮಾರೋಪ ಸಮಾರಂಭ ಕುಮಾರಿ ಪ್ರತೀಕ್ಷಾ ತಿರುಮಲೇಶ್ವರಿ ಇವರ ಪ್ರಾರ್ಥನೆ,ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿಯವರ ಪ್ರಸ್ತಾವನೆ ಹಾಗೂ ಸ್ವಾಗತದೊಂದಿಗೆ ಆರಂಭವಾಯಿತು.
ವಿಶೇಶ ಅಭ್ಯಾಗತರಾದ ಶ್ರೀ ಕೇಶವಪ್ರಸಾದ ಎಡೆಕ್ಕಾನ ಇವರು ವಿದ್ಯಾರ್ಥಿ ಗಳ ಸಂಘಟನೆ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಂಸ್ಕಾರದ ಉಪಯುಕ್ತತೆ ಬಗ್ಗೆ ಶ್ರೀ ಬಾಲಕೃಷ್ಣ ಶರ್ಮ,ಕುಂಬಳೆ ಇವರೂ,
ಸ್ವದೇಶೀ ಗೋತಳಿಯ ಉಪಯುಕ್ತತೆ ಬಗ್ಗೆ ವೇ|ಮೂ|ಕೇಶವಪ್ರಸಾದ ಭಟ್ ಕೂಟೇಲು ಅವರೂ ತಮ್ಮ ವಿಚಾರಗಳನ್ನು ಮಂಡಿಸಿದರು.
ಮಹಾಮಂಡಲ ಅಧ್ಯಕ್ಷ ರಾದ ಶ್ರೀಮತಿ ಈಶ್ವರಿ ಭಟ್ ಬೇರ್ಕಡವು ಇವರು ಮಂಗಲಗೋಯಾತ್ರೆ ಬಗ್ಗೆ
ಮಾಹಿತಿ ನೀಡಿದರು.ಮುಳ್ಳೇರಿಯ ಮಂಡಲ ಮಾತೃ ಪ್ರಧಾನರಾದ ಶ್ರೀಮತಿ ಕುಸುಮ ಪೆರ್ಮುಖ ಇವರು ಶುಭ ಹಾರೈಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಇವರು ಸಂಘಟನೆಯ ಕಾರ್ಯಗಳ ಪರಾಮರ್ಶೆಗೈದರು.ಸ್ಪರ್ಧೆಗಳಲ್ಲಿ ವಿಜಯಿಗಳಿಗೆ ಬಹುಮಾನ ವಿತರಣೆ ಹಾಗೂ ಎಲ್ಲಾ ಸ್ಪರ್ಧಿಗಳಿಗೆ ಸ್ಮರಣಿಕೆಗಳನ್ನೀಯಲಾಯಿತು.ಪರೀಕ್ಷೆಗಳಲ್ಲಿ ವಿಶೇಷ ಸಾಧನೆಗೈದ ವಲಯದ ಶ್ರೀಶ ಪರ್ತಜೆ,ಸ್ಮಿತಾಪಾರ್ವತಿ,ಶ್ರೀಹರ್ಷ ಮುಳಿಯಾಲ ಇವರನ್ನು ಗುರುತಿಸಿ ಸ್ಮರಣಿಕೆ ನೀಡಲಾಯಿತು.ಕರಾಟೆಯಲ್ಲಿ ವಿಶೇಷ ಸಾಧನೆಗೈದ ವಲಯದ ಕುಮಾರಿ ಮಧುಶ್ರೀ ಮಿತ್ರ ಇವರನ್ನು ಗೌರವಿಸಲಾಯಿತು
ವಿದ್ಯಾರ್ಥಿವಾಹಿನಿ ಪ್ರಧಾನ್ ವಿಜಯಶ್ರೀ ಪೆರ್ಲ ಧನ್ಯವಾದವಿತ್ತರು.ವಲಯ ಕಾರ್ಯದರ್ಶಿ ಶಂಕರಪ್ರಸಾದ್ ಕುಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.ಶಾಂತಿಮಂತ್ರ,ಶಂಖನಾದ,ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.



ಗೋಶಾಲೆಯಲ್ಲಿ ವಿದ್ಯಾರ್ಥಿ ಸಂಗಮ Reviewed by Unknown on 07:58:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.