New Posts

recent

ಮಂಗಲಗೋಯಾತ್ರೆ



ನೀನೇ ಎಲ್ಲ ನನ್ನದೇನಿಲ್ಲ
ನಿನ್ನಿಂದಲೆ ಎಲ್ಲ ನನ್ನಿಂದೇನಿಲ್ಲ
ನಿನ್ನ ಕಾಪಾಡಲು ಶಕ್ತಿ ಕೊಡು ತಾಯೇ

ನಿಸ್ವಾರ್ಥಶಿಖರ ನೀನು
ಸ್ವಾರ್ಥದಲ್ಲಿ ಸ್ವಾರ್ಥಿ ನಾನು
ತ್ಯಾಗಕೆ ತಾಯಿ ನೀನು
ಜಿಪುಣರಲ್ಲಿ ಜಿಪುಣ ನಾನು
ನಿನ್ನ ಕಾಪಾಡಲು ಶಕ್ತಿ ಕೊಡು ತಾಯೇ

ತಾಯಿ ನಿನ್ನೊಲುಮೆ ನಮಗಿರಲಿ
ನನ್ನುಸಿರು ನಿನಗಾಗಿ ಇರಲಿ
ನಿನ್ನ ಮಹದ್ದಾರಿ ನಮಗಿರಲಿ
ಸದಾ ನಿನ್ನ ಸ್ಮರಿಪ ಮತಿಯಿರಲಿ
ನಿನ್ನ ಕಾಪಾಡಲು ಶಕ್ತಿ ಕೊಡು ತಾಯೇ

ಪುಣ್ಯದಲ್ಲಿ ಪುಣ್ಯಕೋಟಿ
ಪ್ರೀತಿಯಲ್ಲಿ  ನಿನಗಿಹರೇ ಸಾಟಿ
ಗೋಪ್ರೇಮಿಗಳ ಹೃದಯ ಮೀಟಿ 
ಮಂಗಲಗೋಯಾತ್ರೆಯಲಿ ನಿನ್ನದೇ ದಾಟಿ
ನಿನ್ನ ಕಾಪಾಡಲು ಶಕ್ತಿ ಕೊಡು ತಾಯೇ

ಗುರುವಿಂದ ಗೋವಿಂದನೆಡೆಗೆ 
ಜಗನ್ಮಾತೆಯ ಜಗದ್ಯಾತ್ರೆಗೆ
ಒಳಿತಿನಿಂದ ಜಗದೊಳಿತಿನೆಡೆಗೆ 
ಜಾತಿ ಮತ ಧರ್ಮವ ಮೀರಿದ ಗೋವಿನೆಡೆಗೆ
ಬನ್ನಿರೆಲ್ಲ ಮಂಗಲಗೋಯಾತ್ರೆಯೆಡೆಗೆ

ರಚನೆ, 
ಪೂರ್ಣಾ ಹೆಗಡೆ ಕಪಾಸಿ

ಮಂಗಲಗೋಯಾತ್ರೆ Reviewed by Unknown on 08:37:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.