New Posts

recent

ಗೋಕಿಂಕರ ಯಾತ್ರೆ ಆರಂಭ

ಗೋಕಿಂಕರ ಯಾತ್ರೆ ಆರಂಭ:
ಗೋವಿನ ಕುರಿತಾದ ಭಾವಜಾಗರಣೆಯ ಮಹಾಭಿಯನ, ‘ಗೋಕಿಂಕರ ಯಾತ್ರೆ’ 5 ಸ್ಥಳಗಳಿಂದ ಶುಭಾರಂಭಗೊಂಡಿತು.  ಬೆಂಗಳೂರಿನ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಬೆಳಗ್ಗೆ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳು ಗೋಪೂಜೆ ನೆರವೇರಿಸಿ, ಗೋಧ್ವಜಾರೋಹಣದೊಂದಿಗೆ ಗೋಕಿಂಕರ ಯಾತ್ರೆಗೆ ಚಾಲನೆ ನೀಡಿದರು. ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಮಠದ ಶ್ರೀ ಸೋಪಾನನಾಥ ಸ್ವಾಮಿಗಳು, ಪೂಜ್ಯ ಪಾಂಡುರಂಗ ಜೋಷಿಗಳು, ಗೋಕಿಂಕರ ಯಾತ್ರೆಯ ಪದಾಧಿಕಾರಿಗಳು ಹಾಗೂ ಗೋಕಿಂಕರರು ಉಪಸ್ಥಿತರಿದ್ದರು.   


ಆಂಧ್ರದ ಮಂತ್ರಾಲಯದಿಂದ ಆರಂಭವಾದ ಯಾತ್ರೆಗೆ ಮಂತ್ರಾಲಯದ ಶ್ರೀಸುಭುದೇಂದ್ರತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮಹಾರಾಷ್ಟ್ರದ ಪಂಡರಾಪುರದಿಂದ ಹೊರಟ ರಥಕ್ಕೆ ಅಕ್ಕಲಕೋಟೆಯ ಶ್ರೀಗಳು ಸ್ವಾಗತಿಸಿದರು , ಗೋವಾದ ರಾಮನಾಥಿಯಿಂದ ಹೊರಟ ರಥಕ್ಕೆ ಸನಾತನ ಸಂಸ್ಥೆಯ ಚೈತನ್ಯ ಪ್ರಜಾಪತಿಗಳು, ಹಾಗೂ ಕೇರಳದ ಮಧೂರುಗಳಿಂದ ಹೊರಟ ಗೋಯಾತ್ರೆಗೆ ಸಿದ್ದಿವಿನಾಯಕ ದೇವಾಲಯದಲ್ಲಿ ರವೀಶ್ ತಂತ್ರಿಗಳು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.


 ಗೋಕಿಂಕರರಥ ಚಲಿಸುವ ಪ್ರದೇಶದಲ್ಲಿ ಗೋವಿನ ಕುರಿತಾಗಿ ಜಾಗೃತಿಯನ್ನು ಮೂಡಿಸಲಿದ್ದು, ಗೋಸಂರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.



ಗೋಕಿಂಕರ ಯಾತ್ರೆ ಆರಂಭ Reviewed by Unknown on 08:38:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.