New Posts

recent

ಸೆಪ್ಟೆಂಬರ್ 16 ರಿಂದ `ಗೋ ಕಿಂಕರ' ಯಾತ್ರೆ

ಕಾಸರಗೋಡು :
ಈಸ್ಟ್ ಇಂಡಿಯಾ ಕಂಪೆನಿಯ ಬಂಗಾಳ ರೆಜಿಮೆಂಟಿನ ಶಿಸ್ತಿನ ಸಿಪಾಯಿಯಾಗಿದ್ದ ಶ್ರೀ ಮಂಗಲ್ ಪಾಂಡೆಯು, ಗೋವಿನ ನಿಷ್ಠೆಯ ವಿಷಯದಲ್ಲಿ, ಧರ್ಮನಿಷ್ಠೆಯ ವಿಷಯದಲ್ಲಿ ಕಿಂಚಿತ್ತೂ ಎದೆಗುಂದದೆ ತನ್ನ ಜೀವವನ್ನೇ ಒತ್ತೆಯಿಟ್ಟು ಹೋರಾಡಿದ ಧೈರ್ಯಶಾಲಿ. ಇವನ ಧೈರ್ಯದ ಧ್ವನಿಯು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಂಕಲ್ಪ ಮುಹೂರ್ತವಾಯಿತು. ಮುಂದೆ ಬೃಹದಾಕಾರದ ಕಿಚ್ಚಾಗಿ, ದೇಶದ ಕೆಚ್ಚಾಗಿ ಇಡಿಯ ಭಾರತಕ್ಕೆ ಹಬ್ಬಿತು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಆರಂಭವಾಗಿದ್ದು ಗೋವಿಗಾಗಿ. ಅದನ್ನು ಆರಂಭಿಸಿದ್ದು - ಮಂಗಲ್ ಪಾಂಡೆ. ಕಾಡತೂಸಿನ ಪೊಟ್ಟಣಕ್ಕೆ ಸವರಿದೆ ಎನ್ನಲಾದ ಗೋವಿನ ಕೊಬ್ಬನ್ನು ಬಾಯಿಯಿಂದ ಸ್ಪರ್ಶಿಸಲು  ವಿರೋಧಿಸಿದ ಅಂತಃಶಿಸ್ತು ಪ್ರದರ್ಶಿಸಿದ ಮಂಗಲ ಪಾಂಡೆಗೆ ಗೋಮಾತೆಯ ಬಗ್ಗೆ ಅಪಾರ ಶ್ರದ್ಧೆ ಇತ್ತು.
ಮಂಗಲ್ ಪಾಂಡೆಯನ್ನು ಭಾರತವು ಧರ್ಮನಿಷ್ಠನಾಗಿ ಚಿತ್ರಿಸಿದೆ, ಭಾರತದ ಸ್ವಾತಂತ್ರ ಹೋರಾಟಗಾರನಾಗಿ ಚಿತ್ರಿಸಿದೆ, ಮಹಾನ್ ಯೋಧನಾಗಿ ಚಿತ್ರಿಸಿದೆ, ಅತಿ ಧೈರ್ಯದ ಹುಂಭನಂತೆಯೂ ಕೆಲವರು ಚಿತ್ರಿಸಿದವರಿದ್ದಾರೆ, ಕ್ರಾಂತಿಕಾರಿಯಾಗಿ ಚಿತ್ರಿಸಿದೆ. ಆದರೆ, ಆತನೊಳಗಿನ ಗೋಭಕ್ತಿಯನ್ನು ಎತ್ತರಿಸಿ, ಚಿತ್ರಿಸುತ್ತಿರುವ  ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಮಂಗಲ್ ಪಾಂಡೆಯನ್ನು ಸಮಾಜಕ್ಕೆ ನೆನಪಿಸುವ- `ಮಂಗಲ ಗೋ ಯಾತ್ರೆ' ಯನ್ನು ಸದ್ಯದಲ್ಲೇ ಕೈಗೊಳ್ಳಲಿದ್ದಾರೆ. ಶ್ರೀ ಸ್ವಾಮೀಜಿಯವರು ಕೈಗೊಳ್ಳುತ್ತಿರುವ "ಗೋ ಚಾತುರ್ಮಾಸ್ಯ"ದಲ್ಲಿ ಸರ್ವಸ್ವವೂ ಗೋವಿನ ಕಾಳಜಿಗಾಗಿ ಮುಡಿಪಾಗಿಟ್ಟ ಕಾರ್ಯಕ್ರಮಗಳಾಗಿವೆ. ಗೋ ಸಂತ ಸಂದೇಶಗಳು, ಗೋ ಪುರಸ್ಕಾರಗಳು, ಗೋ ಪೂಜೆ- ಹವನಗಳು ಜೊತೆಗೆ ಮಂಗಲ್ ಪಾಂಡೆಯ ಜೀವನಸಾಧನೆಯನ್ನು ಚಿತ್ರಿಸುವ ಗೋಕಥೆಯನ್ನೂ ಶ್ರೀ ಸ್ವಾಮೀಜಿಯವರು ಅನುಗ್ರಹಿಸಿದ್ದಾರೆ.
ಮಂಗಲ ಗೋಯಾತ್ರೆಯ ಮೊದಲು ಸಂಘಟನಾ ಯಾತ್ರೆಯು ನಡೆಯಲಿದೆ. ಈ ಯಾತ್ರೆಗೆ "ಗೋ-ಕಿಂಕರ ಯಾತ್ರೆ" ಎಂದು ಶ್ರೀಗಳು ಹೆಸರಿಸಿದ್ದಾರೆ. ಕರ್ನಾಟಕದ ಹಾಗೂ ಸುತ್ತಲಿನ ರಾಜ್ಯಗಳ ಪುಣ್ಯ ಸ್ಥಾನಗಳಿಂದ - ಪಂಚ ರಥಗಳು ಹೊರಡುವ ಮೂಲಕ ಗೋ-ಕಿಂಕರ ಯಾತ್ರೆಯು ಆರಂಭವಾಗಲಿದೆ. ಕರ್ನಾಟಕದ ದೊಡ್ಡಬಸವ ಸನ್ನಿಧಿ, ಕೇರಳದ ಮಧೂರು ಶ್ರೀಮದನಂತೇಶ್ವರ ಸನ್ನಿಧಿ, ಗೋವಾ ರಾಜ್ಯದ ರಾಮನಾಥಿ ಸನ್ನಿಧಿ, ಮಹಾರಾಷ್ಟ್ರದ ಫಂಡರಾಪುರ ಸನ್ನಿಧಿ, ಹಾಗೂ ಮಂತ್ರಾಲಯ ಶ್ರೀ ರಾಘವೇಂದ್ರ ಸನ್ನಿಧಿಗಳು ಪಂಚಕ್ಷೇತ್ರಗಳು. ಇಲ್ಲಿಂದ ಐದು ರಥಗಳು ಹೊರಟು, ಕರ್ನಾಟಕದೊಳಕ್ಕೆ ಬಂದು, ಕರ್ನಾಟಕದ ಪ್ರತಿ ತಾಲೂಕನ್ನು ತಲುಪಲಿದೆ.

ಗೋ ಆಧಾರಿತ ಜೀವನ ನಡೆಸುವ ರೈತರನ್ನು, ಗೋವಿಗಾಗಿ ಹೋರಾಡುವ ಗೋರಕ್ಷಕರನ್ನು, ಗೋವನ್ನು ರಕ್ಷಿಸುವ ಸಂತರನ್ನು,  ವಿದ್ಯಾರ್ಥಿಗಳನ್ನು ತನ್ನ ಜೊತೆಯಲ್ಲಿ ಕೂಡಿಸಿಕೊಂಡು ಯಾತ್ರೆಯು ಮುಂದುವರಿಯಲಿದೆ. ಜನರಲ್ಲಿ ಗೋ ಸಂಚಲನವನ್ನು ಮೂಡಿಸಲಿದೆ. ಕಾಸರಗೋಡು ತಳಿಯ ಗೋವುಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಬೋಧನೆಯ ಗುರಿಯೊಂದಿಗೆ `ಕಾಮದುಘಾ' ಯೋಜನೆಯ ಮೂಲಕ ಪೆರ್ಲದ ಬಜಕೂಡ್ಲು ಸಹಿತ ನಾಡಿನ ಹಲವೆಡೆ ಆರಂಭವಾದ `ಅಮೃತಧಾರಾ ಗೋಶಾಲೆ', ಭಾರತೀಯ ಗೋಯಾತ್ರೆ, ವಿಶ್ವಮಂಗಲ ಗೋಯಾತ್ರೆ, ವಿಶ್ವ ಗೋ ಸಮ್ಮೇಳನ, ಕೇರಳದ ವಿವಿಧೆಡೆಗಳಲ್ಲಿ ದೇಶೀ ಗೋತಳಿ0ು ಪ್ರಚಾರಕ್ಕಾಗಿ ಕಾಸರಗೋಡು ತಳಿ ಗೋವುಗಳ ಪ್ರದರ್ಶನ ಮತ್ತು ಕೇರಳದ ಉತ್ತರ ತುದಿಯ ಅನಂತಪುರದಿಂದ ದಕ್ಷಿಣ ತುದಿಯ ತಿರುವನಂತಪುರದ ತನಕ 2013 ಅಕ್ಟೋಬರ್ 14ರಿಂದ 18 ರ ತನಕ `ಅನಂತ ಗೋ ಯಾತ್ರೆ' ಇತ್ಯಾದಿ ಅಭೂತಪೂರ್ವ ಗೋಕುಲ ಉದ್ಧಾರದ ಕಾರ್ಯಗಳನ್ನು ಆಯೋಜಿಸಿದ ಅನುಭವವಿರುವ ಶ್ರೀಮಠವು ಈ ಉಭಯ ಯಾತ್ರೆಗಳ ಸಾರಥ್ಯ ವಹಿಸಿವೆ. ರಾಜ್ಯದಾದ್ಯಂತ ಸಹಸ್ರಾರು ಸಂತರು ಕೈಜೋಡಿಸಲಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಯಾತ್ರೆಯ ಚೌಕಟ್ಟಿನ ಬಗ್ಗೆ ವಿವರಗಳನ್ನು ಪಡೆಯಲು ಬಿ.ಜಿ.ಜಗದೀಶ ಗೋಳಿತ್ತಡ್ಕ (9495905061) ಮತ್ತು ಚಂದ್ರಶೇಖರ ಪಳ್ಳತ್ತಡ್ಕ (9447490389) ಇವರನ್ನು  ಸಂಪರ್ಕಿಸಬಹುದು.

ಕಾಸರಗೋಡು ಜಿಲ್ಲೆಯ ಕಾರ್ಯಕ್ರಮ ವಿವರ:

16-9-2016:
  • ಬೆಳಗ್ಗೆ 7 ಗಂಟೆಗೆ ಮಧೂರು ದೇವಸ್ಥಾನದಲ್ಲಿ ಸಮಾವೇಶ 
  • 9.30 ದೇವಸ್ಥಾನ ಸಭಾಂಗಣದಲ್ಲಿ ಸಾರ್ವಜನಿಕ ಸಭೆ 
  • 11.30  ನೀರ್ಚಾಲಿನಲ್ಲಿ  ಸಭೆ 
  • ಸಾಯಂ 04.30.ಬದಿಯಡ್ಕ ವಿದ್ಯಾ ಪೀಠದಲ್ಲಿ ಸಭೆ 

17.09.2016: 
  • 09.30: ಪೆರ್ಲ ಸತ್ಯನಾರಾಯಣ ಮಂದಿರದಲ್ಲಿ ಸಭೆ 
  • ಮಧ್ಯಾಹ್ನ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನ್ನಿಧಿಗೆ 
  • ಸಾಯಂ 04.30.ಮುಳ್ಳೇರ್ಯ ಗಣೇಶ ಮಂದಿರದಲ್ಲಿ ಸಭೆ                        

18.09.2016:
  • ಬೆಳಗ್ಗೆ ಕಾಸರಗೋಡು ಸಭೆ 
  • ಮಧ್ಯಾಹ್ನ ಕುಂಬಳೆ ಸಭೆ 
  • ಸಂಜೆ ಉಪ್ಪಳ ಕೊಂಡೆವೂರಿನಲ್ಲಿ ಸಭೆ
19.09.2016:
  • ಮಂಗಳೂರಿಗೆ ಯಾತ್ರೆ ಮುಂದುವಯುತ್ತದೆ.

⚪⚪⚪⚪⚪⚪⚪⚪⚪⚪⚪
ಸೆಪ್ಟೆಂಬರ್ 16 ರಿಂದ `ಗೋ ಕಿಂಕರ' ಯಾತ್ರೆ Reviewed by Unknown on 08:54:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.