New Posts

recent

ಮಾಣಿ ಮಠದಲ್ಲಿ ಆರಂಭಗೊಂಡ ಸಂಸ್ಕೃತಿ ಉಪನ್ಯಾಸ ಮಾಲಿಕೆ

ಮಾಣಿ ಮಠದಲ್ಲಿ ಆರಂಭಗೊಂಡ ಸಂಸ್ಕೃತಿ  ಉಪನ್ಯಾಸ ಮಾಲಿಕೆ
ಮಾಣಿ ಮಠ,  ಪೆರಾಜೆ 18-06-2016
ಪೆರಾಜೆಯ ಮಾಣಿ ಮಠದಲ್ಲಿ ಮೈಸೂರಿನ ಶ್ರೀ ಭಾರತೀ ಯೋಗಧಾಮದ ಆಚಾರ್ಯರಾದ *ಡಾ. ಕೆ ಯಲ್ ಶಂಕರನಾರಾಯಣ ಜೋಯಿಸ*ರಿಂದ "ಸಂಸ್ಕೃತಿ ಮತ್ತು ಜೀವನ ಕ್ರಮ "ದ  ಬಗ್ಗೆ *ಸಂಸ್ಕೃತಿ ಉಪನ್ಯಾಸ ಮಾಲಿಕೆ* ದಿನಾಂಕ  18-06-2016ರಂದು  ಆರಂಭಗೊಂಡಿತು.
ಆಚಾರ್ಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ನಂತರ ಧರ್ಮದ ಚೌಕಟ್ಟಿನಲ್ಲಿ ಅರ್ಥ ಕಾಮ ಮೋಕ್ಷಗಳೆಡೆಗೆ ಜೀವನವನ್ನು  ಕೊಂಡೊಯ್ಯುವ ಕುರಿತು  ಅರ್ಥ ಸಹಿತ ವಿವರಿಸಿದರು. ಅದೇರೀತಿ ಭಾರತೀ ಯೋಗಧಾಮದ ಪ್ರಾಚಾರ್ಯರಾದ ಆದರ್ಶ ಹಾಗೂ ವಿದ್ವಾನ್ ಅನಂತ ಬಿ ಜಿ  ಅವರು ಮಾನವ ದೇಹ ಮತ್ತು ಮಾನವ ಜನ್ಮದ ಕುರಿತು ಮಾಹಿತಿಯಿತ್ತರು. 
ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳ ಒಳತಿರುವು ಮತ್ತು ಒಳತಿರುಳುಗಳನ್ನೊಳಗೊಂಡು ವಿದ್ಯಾರ್ಥಿ ಜೀವನವು  ಯಶಸ್ಸಿಯಾಗುವತ್ತ  ಮಾಹಿತಿಗಳನ್ನು ನೀಡಿದರು. 
ಈ ಪ್ರವಚನ ಮಾಲಿಕೆಯು ನಿರಂತರವಾಗಿ ತಿಂಗಳಿಗೊಂದರಂತೆ ನಡೆಯಲಿರುವುದು. ಮುಂದಿನ ಪ್ರವಚನಮಾಲಿಕೆಯು ಜುಲೈ10 ಭಾನುವಾರದಂದು ನಡೆಯಲಿದೆ. ಆಸಕ್ತರು ಮುಂದಿನ ದಿನಗಳಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.     
ಆಚಾರ್ಯರಿಗೆ ಕೆ. ನಾರಾಯಣ ಭಟ್ ಬೆಳ್ಳಿಗೆ ದಂಪತಿಗಳು ಇವರು ಫಲ ಸಮರ್ಪಣೆ ಮಾಡಿ ಗೌರವಿಸಿದರು. ಯಲ್ ಯನ್ ಕೂಡೂರು  ಕಾರ್ಯಕ್ರಮ ನಿರ್ವಹಿಸಿದರು. ಮಲ್ಲಿಕಾ ಜಿ. ಕೆ ಭಟ್, ಸಿರಿ ಎಲ್. ಎನ್ ಕೂಡೂರು  ಮತ್ತು ಶ್ರೀದೇವಿ ಕಾನಾವು ಕಾರ್ಯಕ್ರಮ ಸಂಯೋಜಿಸಿದರು. ಸುಮಾರು ಎಂಭತ್ತು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 
~
Photos:-








*ವರದಿ*
-ಜಯಲಕ್ಷ್ಮಿ ಕುಕ್ಕಿಲ
ಮಾಣಿ ಮಠದಲ್ಲಿ ಆರಂಭಗೊಂಡ ಸಂಸ್ಕೃತಿ ಉಪನ್ಯಾಸ ಮಾಲಿಕೆ Reviewed by Unknown on 04:02:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.