ಸಾಮಾಜಿಕ ಜಾಲತಾಣಿಗರ ಸರ್ವಸೇವೆ
"ಸಾಮಾಜಿಕ ಜಾಲತಾಣಿಗರ ಸರ್ವಸೇವೆ''
ಕಳೆದ ವರ್ಷ ಅದು ಶಿಷ್ಯ ಭಕ್ತರ ಪರೀಕ್ಷೆಯ ಸಂದರ್ಭವಾಗಿತ್ತು. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಸತ್ಯ ನಮ್ಮಲ್ಲಿ ಇದೆ ಎಂಬ ಸಂಪೂರ್ಣ ನಿಷ್ಠೆಯಿಂದ ಸಾವಿರ ಸಾವಿರದಷ್ಟು ಜನಗಳು ಸತ್ಯದ ಪರವಾಗಿ ಹೋರಾಟಕ್ಕೆ ನಿಂತೆವು, ನೀವು ನಂಬಲೇಬೇಕು, ಆ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಪರಿಚಯವೂ ಇರಲಿಲ್ಲ, ಆದರೆ ನಾವೆಲ್ಲಾ ಗುರುಭಕ್ತರು ಎಂಬ ಹೃದಯಾಂತರಾಳದ ಬಾಂಧವ್ಯವೊಂದು ನಮಗೆ ಗೊತ್ತಿಲ್ಲದಂತೆಯೇ ಏರ್ಪಟ್ಟಿತ್ತು. ಹಾಗೆ ಹೋರಾಡುತ್ತಿದ್ದ ಎಲ್ಲ ಶಿಷ್ಯಭಕ್ತರು ಒಮ್ಮೆ ಸೇರಬೇಕು ಎಂಬ ಚಿಂತನೆ ಬಂದಿದ್ದಷ್ಟೇ, ನಂತರ ನಡೆದ್ದಿದ್ದು ಇತಿಹಾಸ.. ಆಗಷ್ಟ ೯ರ ಐತಿಹಾಸಿಕ ಕಾರ್ಯಕ್ರಮ, ಪರಮಪೂಜ್ಯರ ಅವಿಸ್ಮರಣೀಯ ಆಶೀರ್ವಚನ.
ಆ ದಿನ ಮತ್ತೆ ಮರುಕಳಿಸಲಿದೆ. ಈ ಸಲ ಆಗಷ್ಟ್ ೧೫.. ಹೌದು.. ಸಾಮಾಜಿಕ ಜಾಲತಾಣಿಗರೆಲ್ಲ ಮತ್ತೊಮ್ಮೆ ಸೇರೋಣ.. "ನಾವಿದ್ದೇವೆ" ಕೂಗನ್ನು ಇನ್ನೊಮ್ಮೆ ಮೊಳಗಿಸೋಣ.. ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳು - ಭಾಷಣಕಾರರೂ ಆಗಿರುವ ಶ್ರೀಕೃಷ್ಣ ಉಪಾಧ್ಯಾಯರು ಹೇಳುವಂತೆ ಆಗಷ್ಟ್ ೧೫ ಭಾರತದ ಇತಿಹಾಸದಲ್ಲಿ ದಾಖಲಾದಂತೆ, ಶ್ರೀ ರಾಮಚಂದ್ರಾಪುರಮಠದ ಇತಿಹಾಸದಲ್ಲೂ ದಾಖಲಾಗುತ್ತದೆ.
ಸಾಮಾಜಿಕ ಜಾಲತಾಣಿಗರೆಲ್ಲರೂ https://goo.gl/EpDmdY ಈ ಲಿಂಕ್ ಮುಖಾಂತರ ನೊಂದಾಯಿಸಿಕೊಳ್ಳಬೇಕು ಎಂದು ವಿನಂತಿ...Event link: Click Here
ಶ್ರೀಕೃಷ್ಣ ಉಪಾಧ್ಯಾಯರು ಈ ಕಾರ್ಯಕ್ರಮದ ಕಲ್ಪನೆಗೆ ಬಹಳ ಹತ್ತಿರವೂ ಹೌದು, ಇದಕ್ಕಿಂತ ಬಹಳ ಎತ್ತರವೂ ಹೌದು.. ಸಾಮಾಜಿಕ ಜಾಲತಾಣದಲ್ಲಂತೂ ಅವರು ನಮ್ಮೊಂದಿಗೆ ಅಲ್ಲಲ್ಲ ಅವರೊಂದಿಗೆ ನಾವು ಇದ್ದೇವೆ. ಇದಷ್ಟೇ ಅಲ್ಲದೆ, ಇವರು ಸಮಾಜದ ಮಧ್ಯದಲ್ಲಿ ಶ್ರೀ ಚಕ್ರವರ್ತಿ ಅಣ್ಣನ ಮಾರ್ಗದರ್ಶನದಲ್ಲಿ ಸತ್ಯದ ಪರವಾಗಿ ಕೆಚ್ಚೆದೆಯ ಮಾತುಗಳನ್ನಾಡಿ ಸಾವಿರಾರು ಗುರುಭಕ್ತರ ಹೃದಯದಲ್ಲಿ ಭರವಸೆಯನ್ನು ಹುಟ್ಟಿಸಿದವರು- ಸಮಾಧಾನವನ್ನು ತಂದವರು.. ಹೀಗೆ ಉಪಾಧ್ಯಾಯರು ಈ ನಮ್ಮ ಕಾರ್ಯಕ್ರಮಕ್ಕೆ ಅತ್ಯಂತ ಸೂಕ್ತರೆನಿಸುತ್ತಾರೆ.
[post_ad]
ಅದೇ ದಿನ ನಮ್ಮ ಸೌಭಾಗ್ಯವೆಂಬಂತೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಗಳವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾದ ಗೋವಿನ ಕುರಿತಾದ "ಗೋಕಥೆ"ಯನ್ನು ನಡೆಸಿಕೊಡಲಿದ್ದಾರೆ.
ಆ ದಿನ ಸಮಯದೊತ್ತಡ ಇರುವ ಕಾರಣ, ದೀರ್ಘ ಗುರುವಾಣಿ ಆಲಿಸುವ ಒಂದೇ ಅವಕಾಶ ಅಂದ್ರೆ ಗೋ ಕಥೆ ಆಲಿಸುವುದು ಮಾತ್ರ. ಈ ಕಾರಣದಿಂದ ಆ ದಿನ ಗೋಕಥೆಯನ್ನು ಪ್ರಾಯೋಜಕತ್ವ ಮಾಡುವ ಮೂಲಕ ದಿನದ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾರ್ಥಕತೆ ಹೊಂದಬಹುದು ಎಂಬ ಚಿಂತನೆ ನಡೆದಿದೆ, ತಮ್ಮ ಅಭಿಪ್ರಾಯವನ್ನು ಅಪೇಕ್ಷಿಸುತ್ತಿದ್ದೇವೆ.
ಎರಡೂ ಕಾರ್ಯಕ್ರಮಕ್ಕೆ ನಾವೆಲ್ಲರೂ ಹೆಚ್ಚಿನ ಮಟ್ಟದಲ್ಲಿ ಸೇವೆ ಸಲ್ಲಿಸುವ ಮೂಲಕ ಗುರು ಹಾಗೂ ಗೋಮಾತೆಯ ಕೃಪೆಗೆ ಪಾತ್ರರಾಗೋಣ.
ಎರಡೂ ಕಾರ್ಯಕ್ರಮಕ್ಕೆ ನಾವೆಲ್ಲರೂ ಹೆಚ್ಚಿನ ಮಟ್ಟದಲ್ಲಿ ಸೇವೆ ಸಲ್ಲಿಸುವ ಮೂಲಕ ಗುರು ಹಾಗೂ ಗೋಮಾತೆಯ ಕೃಪೆಗೆ ಪಾತ್ರರಾಗೋಣ.
ನಾವೆಲ್ಲರೂ ಇನ್ನೊಮ್ಮೆ ಸೇರೋಣ.. ಒಂದಷ್ಟು ಆತ್ಮೀಯ ಕ್ಷಣಗಳನ್ನು ಕಳೆಯೋಣ,
ಬಂಧು ಮಿತ್ರರೊಡನೆ ತಮ್ಮ ಆಗಮನವನ್ನು ಅಪೇಕ್ಷಿಸುವ..
ಸಾಮಾಜಿಕ ಜಾಲತಾಣಿಗರು
ಹರೇ ರಾಮ
#Gouchaturmasya
#Gouchaturmasya
ಸಾಮಾಜಿಕ ಜಾಲತಾಣಿಗರ ಸರ್ವಸೇವೆ
Reviewed by Unknown
on
06:50:00
Rating:

No comments: