New Posts

recent

ಗೋಸಂರಕ್ಷಣೆಗಿನ್ನೊಂದು ದಿಟ್ಟ ಹೆಜ್ಜೆ(ಗೋವು ಸಂತ ಸಂಗಮ)

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಶ್ರೇಷ್ಠ ಸ್ಥಾನವಿದೆ. ಪುರಾಣ ಕಾಲದಿಂದಲೂ ಗೋವನ್ನು ದೇವರಂತೆ ಆರಾಧಿಸುವ ಸತ್ಸಂಪ್ರದಾಯ ಭಾರತೀಯರದ್ದಾಗಿದೆ. ಕರುಣೆ, ಸಹನೆ, ಪ್ರೀತಿ ವಾತ್ಸಲ್ಯದ ಮಂಗಳ ರೂಪವೇ ಗೋವು. ವಸಿಷ್ಠರ ಆಶ್ರಮದಲ್ಲಿ ನಂದಿನಿಯಾಗಿ, ಜಮದಗ್ನಿ ಮಹರ್ಷಿಗಳ ಆಶ್ರಮದಲ್ಲಿ ಕಾಮಧೇನುವಾಗಿ, ರಾಮಚಂದ್ರಾಪುರಮಠದಲ್ಲಿ ರಾಘವೇಶ್ವರ ಶ್ರೀಗಳ ಪ್ರೀತಿಯ 'ಮಹಾನಂದಿಯಾಗಿ' ಯುಗಯುಗಗಳಿಂದ ಇಂದಿನವರೆಗೂ ಬಂಧುವಾಗಿ ತಾಯಿಯಾಗಿ ಪೂಜಿಸಲ್ಪಡುತ್ತಿರುವ ದೇವರೇ 'ಗೋವು.'
Photo Credit: Sri Ramachandrapura Math [Facebook Page]

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಶ್ರೇಷ್ಠ ಸ್ಥಾನವಿದೆ. ಪುರಾಣ ಕಾಲದಿಂದಲೂ ಗೋವನ್ನು ದೇವರಂತೆ ಆರಾಧಿಸುವ ಸತ್ಸಂಪ್ರದಾಯ ಭಾರತೀಯರದ್ದಾಗಿದೆ. ಕರುಣೆ, ಸಹನೆ, ಪ್ರೀತಿ- ವಾತ್ಸಲ್ಯದ ಮಂಗಳ ರೂಪವೇ ಗೋವು. ವಸಿಷ್ಠರ ಆಶ್ರಮದಲ್ಲಿ ನಂದಿನಿಯಾಗಿ, ಜಮದಗ್ನಿ ಮಹರ್ಷಿಗಳ ಆಶ್ರಮದಲ್ಲಿ ಕಾಮಧೇನುವಾಗಿ, ರಾಮಚಂದ್ರಾಪುರಮಠದಲ್ಲಿ ರಾಘವೇಶ್ವರ ಶ್ರೀಗಳ ಪ್ರೀತಿಯ ' ಮಹಾನಂದಿಯಾಗಿ ' ಯುಗಯುಗಗಳಿಂದ ಇಂದಿನವರೆಗೂ ಬಂಧುವಾಗಿ ತಾಯಿಯಾಗಿ ಪೂಜಿಸಲ್ಪಡುತ್ತಿರುವ ದೇವರೇ ' ಗೋವು. '

  ಕಾಲಘಟ್ಟದಲ್ಲಿ ಗೋವಿಗಾಗುವ ಅನ್ಯಾಯ ,ಅಕ್ರಮವನ್ನು ತಡೆಯುವ ಸಲುವಾಗಿ ತಮ್ಮದೇ ಆದ ರೀತಿಯಲ್ಲಿ ಹೋರಾಡುತ್ತಿರುವವರು 'ರಾಘವೇಶ್ವರಭಾರತೀ ಸ್ವಾಮಿಗಳು.' ವಿಶ್ವ ಗೋ ಸಮ್ಮೇಳನ, ವಿಶ್ವ ಮಂಗಳ ಗೋಗ್ರಾಮ ಯಾತ್ರೆ, ಗೋಕಥಾ ಮುಂತಾದ ಮಹಾನ್ ಕಾರ್ಯಕ್ರಮಗಳ ಹರಿಕಾರರು, ರಾಘವೇಶ್ವರ ಶ್ರೀಗಳು.

ಗೋ ಸಂರಕ್ಷಣೆಗಾಗಿ ಶ್ರೀಗಳವರ ಮತ್ತೊಂದು ದಿಟ್ಟ ಹೆಜ್ಜೆಯೇ 'ಗೋವು-ಸಂತ ಸಂಗಮ.'ಭಾರತ, ಭಾರತೀಯ ಸಂಸ್ಕೃತಿ, ಆಚಾರ - ವಿಚಾರಗಳ ಪ್ರತೀಕವಾದ ಗೋವು ಮತ್ತು ಸಂತರನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಭಾಗ್ಯ ಪ್ರಾಪ್ತವಾದದ್ದು ಸಂಗಮದಲ್ಲಿ. ಎರಡು ನದಿಗಳು ಸಂಗಮವಾಗಿ ಒಂದಾಗುವಂತೆ, ಗೋವು-ಗೋವು-ಸಂತ ಸಂಗಮದಲ್ಲಿ ನರನಾರಾಯಣರ ಸಂಗಮವಾಗಿ ಗೋ ರಕ್ಷಣೆ ಎಂಬ ಮಹಾನದಿಯಾಯಿತು. ಹೇಗೆ ಒಂದು ಹೂವಿಗೆ ಹಲವು ಜೇನು ನೊಣಗಳು ಕುಸುಮಕ್ಕಾಗಿ ಮುತ್ತಿಗೆ ಹಾಕುತ್ತವೋ ಹಾಗೇ ಸಂತರೆಂಬ ಹೂಗಳ ಬಳಿಗೆ ಗುರುಭಕ್ತರೆಂಬ ಜೇನುಗಳು ಗುರುವಾಕ್ಯವೆಂಬ ಕುಸುಮದ ಸಂಗ್ರಹಣೆಗಾಗಿ ಸೇರಿದ್ದರು. ಎಲ್ಲೆಲ್ಲೂ ಸಿಡಿಲ ಧನಿಯಂತೆ ಕೇಳುತ್ತಿದ್ದ ಗೋ ರಕ್ಷಣೆಯ ಘೋಷಣೆಗಳು ಒಮ್ಮೆಲೇ ಯುಗದಲ್ಲಿ ಅರ್ಜುನನ ಗಾಂಢೀವದ ಠೇಂಕಾರದ ಶಬ್ದವನ್ನು ಕೇಳಿಸಿತು.

ಸಂಗಮದಲ್ಲಿ ವಿಶೇಷವಾಗಿ ಪಂಚಗವ್ಯ ವಿತರಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಪಂಚಗವ್ಯದ ಸೇವನೆಯಿಂದ ದೇಹಮಾತ್ರವಲ್ಲದೆ ಮನಸ್ಸೂ ಶುದ್ದಿಯಾಯಿತು.ಶಿಸ್ತುಬದ್ದವಾದ ವ್ಯವಸ್ಥೆ ಸಂಗಮದ ಕಳೆಯನ್ನು ಹೆಚ್ಚಿಸಿತು ಮಾತ್ರವಲ್ಲದೆ ಲಘು ಉಪಹಾರ ಬಂದವರ ಹಸಿವನ್ನೂ ನೀಗಿಸಿತು.

ವೇದಿಕೆಯಲ್ಲಿ, ಸೂರ್ಯನಂತೆ ರಾಘವೇಶ್ವರ ಶ್ರೀಗಳು ತೇಜೋಮಯವಾಗಿ ಬೆಳಗುತ್ತಿದ್ದರು. ಶ್ರೀಶ್ರೀಗಳವರ ಸಂದೇಶ ಕರ್ಣಮಧುರವೂ ಸನ್ಮಾರ್ಗಕಾರಿಯೂ ಆಗಿತ್ತು.ಉಪಸ್ಥಿತರಿದ್ದಂತಹ ವಿವಿಧ ಮಠಾಧೀಶರೂ ಸಂದೇಶವನ್ನು ನೀಡಿದರು.ಗುರುಬಂಧುಗಳೆಲ್ಲಾ ಗೋ ರಕ್ಷಣೆಯ ಪ್ರತಿಜ್ಞೆಯನ್ನು ಸ್ವೀಕರಿಸಿ ಸಾರ್ಥಕ್ಯವನ್ನು ಪಡೆದರು. ಭವ್ಯ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಗೋ ಹಂತಕರಿಗೆ, ಸಂಚುಕೋರರಿಗೆ ಯವುದೇ ತೊಂದರೆ ಬಂದರೂ ಎದುರಿಸಲು ಸಿದ್ದ ಎಂಬುದನ್ನು ತೋರಿಸಿಕೊಟ್ಟರು.

 "ಹರೇ ರಾಮ"

-Varun K.P.
ಗೋಸಂರಕ್ಷಣೆಗಿನ್ನೊಂದು ದಿಟ್ಟ ಹೆಜ್ಜೆ(ಗೋವು ಸಂತ ಸಂಗಮ) Reviewed by Unknown on 10:11:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.