ಸಂಸ್ಕೃತಿ ಉಪನ್ಯಾಸ ಮಾಲಿಕಾ -2
ಮಾಣಿ-ಪೆರಾಜೆ:10.7.2016
ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಾಶೀರ್ವಾದದಲ್ಲಿ ಮಾಣಿಯ ಪೆರಾಜೆ ಮಠದಲ್ಲಿ ಸಂಸ್ಕೃತಿ ಉಪನ್ಯಾಸ ಮಾಲಿಕೆಯ ಜುಲೈ ತಿಂಗಳ ಮಾಲಿಕೆಯು ಅನಾವರಣಗೊಂಡಿತು. ಮೈಸೂರಿನ ಭಾರತೀಯೋಗಧಾಮದ ಆಚಾರ್ಯರಾದ ಡಾ|| ಕೆ.ಎಲ್ ಶಂಕರನಾರಾಯಣ ಜೋಯಿಸರು ಚತುರ್ವಿಧ ಪುರುಷಾರ್ಥದ ವಿಭಾಗಗಳನ್ನು ಪರಿಚಯಿಸುತ್ತ ಧರ್ಮದ ವಿಷಯದಲ್ಲಿ ಹಲವು ಮಾಹಿತಿಯನ್ನಿತ್ತರು. ಯೋಗಭೋಗಗಳಿಂದ ಕೂಡಿದ ಈ ಶರೀರದಲ್ಲಿ ಧರ್ಮವು ಹೇಗಿರಬೇಕು ಎನ್ನುವ ಬಗ್ಗೆ ವ್ಯಾಖ್ಯಾನಗಳನ್ನಿತ್ತರು. ಅಂತೆಯೇ ಬದಲಾಗುತ್ತಿರುವ ಅಹಾರ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಿ ಸಾತ್ವಿಕ ಆಹಾರಕ್ರಮಗಳ ಔಚಿತ್ಯ, ರೀತಿನೀತಿಗಳನ್ನು ಪರಿಚಯಿಸಿದರು.
ದೀಪಜ್ವಲನದೊಂದಿಗೆ ಪ್ರಾರಂಭವಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಸುಮಾರು 75ರಷ್ಟು ಜನರು ಪಾಲ್ಗೊಂಡರು. ಈ ಉಪನ್ಯಾಸ ಮಾಲಿಕೆಯು ಪ್ರತೀ ತಿಂಗಳು ನಡೆಯುತ್ತಿದ್ದು ಆಸಕ್ತರು ಸದುಪಯೋಗ ಪಡೆದುಕೊಳ್ಳಬಹದು.
ಡಾ. ರವಿಶಂಕರ್ ಯೇಳ್ಕಾನ ದಂಪತಿಗಳು ಆಚಾರ್ಯರಿಗೆ ಫಲವಿತ್ತು ಗೌರವಿಸಿದರು. ಶ್ರೀ ಎಲ್ ಎನ್ ಕೂಡೂರು ಕಾರ್ಯಕ್ರಮ ನಿರೂಪಿಸಿದರು.ಮಲ್ಲಿಕಾ ಜಿ ಕೆ ಭಟ್, ಸಿರಿ ಎಲ್ ಎನ್ ಕೂಡೂರು, ಶ್ರೀದೇವಿ ಕಾನಾವು, ಜಯಲಕ್ಷ್ಮೀ ಕುಕ್ಕಿಲ ಕಾರ್ಯಕ್ರಮ ಸಂಯೋಜಿಸಿದರು.
-ಜಯಲಕ್ಷ್ಮೀ ಕುಕ್ಕಿಲ
Photos:
ಸಂಸ್ಕೃತಿ ಉಪನ್ಯಾಸ ಮಾಲಿಕಾ -2
Reviewed by Unknown
on
10:27:00
Rating:

No comments: