New Posts

recent

ಪಂಚಗವ್ಯ ಏಕೆ?


"ಪಂಚಗವ್ಯ"  ಏಕೆ?
'ಪಂಚಗವ್ಯ' ವು ಕೇವಲ ಬಾಹ್ಯಶುದ್ದಿಯನ್ನು ಮಾತ್ರ ಮಾಡುವುದಿಲ್ಲ ಕಿಂತು ಚರ್ಮದಿಂದ ಹಿಡಿದು ಮೂಳೆಗಳಲ್ಲಿರುವ ಸಕಲ ರೋಗಗಳನ್ನು ದೂರಮಾಡಿ ನಮ್ಮನ್ನು ಎಲ್ಲ ರೀತಿಯಿಂದ ಪವಿತ್ರರನ್ನಾಗಿ ಮಾಡುತ್ತದೆ.
ಸಕಲರೋಗಗಳಿಗೂ "ರಾಮಬಾಣ" ಎನಿಸಿದೆ ಪ್ರತಿಜೈವಿಕ (antibiotic) ಔಷಧಿಗಳಿರುವಾಗ ಹಳೇಕಾಲದ ಈ ಪ್ರಾಣಿ ಮಲ-ಮೂತ್ರಗಳಿಂದ ಕೂಡಿದ "ಪಂಚಗವ್ಯ" ವನ್ನು ಸ್ವೀಕರಿಸುವುದು ಅಂಧವಿಶ್ವಾವಲ್ಲವೆ?
  ನಮ್ಮ ಶಾಸ್ತ್ರವು ಸರ್ವಥಾ ಅಂಧವಿಶ್ವಾವನ್ನು ಅವಲಂಬಿಸಿಲ್ಲ.ಸರಿಯಾದ ಕ್ರಮದಲ್ಲಿ ತಯಾರಿಸಿದ ಪಂಚಗವ್ಯ ಶಾರೀರಿಕ ಹಾಗೂ ಮಾನಸಿಕ ಸಕಲವ್ಯಾದಿಗಳನ್ನು ದೂರಮಾಡುವದು.ಪ್ರತಿಜೈವಿಕ (Antibiotic) ಔಷಧಿಗಳು ರೋಗಗಳನ್ನು ಗುಣಮಾಡುವ ಜೊತೆಯಲ್ಲಿ ಶರೀರದ ಸ್ವಾಭಾವಿಕ ಪ್ರಕ್ರಿಯೆಗೆ ಅಡ್ಡಿಯನ್ನೂ ಮಾಡುವುವು.ಪಂಚಗವ್ಯ ಯಾವ ಸ್ವಾಭಾವಿಕ ಪ್ರಕ್ರಿಯೆ ಗೂ ಹಾನಿ ಮಾಡದೇ ರೋಗಗಳನ್ನು ಮಾತ್ರ ದೂರ ಮಾಡುವವು.ಆರ್ಯವೇದ ಶಾಸ್ತ್ರಗಳು ಈ ಬಗ್ಗೆ ವಿಸ್ತ್ರೃತವಾದ ವಿವರಣೆಗಳನ್ನು ಕೊಟ್ಟಿವೆ.
   ಅವುಗಳ ವಿವರಣೆ ಈ ರೀತಿಯಾಗಿ ಇವೆ.
ಹಸುವಿನ ಮೂತ್ರ(ಗೋಮೂತ್ರ) ಹಾಗೂ ಹಸುವಿನ ಸೆಗಣೆ( ಗೋಮಯ) ಇವು ಹಸುವಿನ ಶರೀರದಿಂದ ಹೊರಟ ಹೊಲಸು ಅಲ್ಲ.ಅವುಗಳ ಉಪಯೋಗ ಈ ರೀತಿಯಾಗಿದೆ.
೧.ಗೋಮೂತ್ರ:-- ಇದು ತೀಕ್ಷ್ಣ,ಉಷ್ಣ, ಪಾಚಕ, ಜಠಾರಾಗ್ನಿ, ದೀಪಕ ಪಿತ್ತಕಾರಕ ಮೇಧಾಶಕ್ತಿ ವರ್ಧಕ, ಲೇಖನ ಶಕ್ತಿ ಮತ್ತು ಬುದ್ದಿಶಕ್ತಿಗಳನ್ನು ಬೆಳೆಸುತ್ತದೆ.
  ಹೊಟ್ಟೆಗೆ ಸಂಬಂಧಿಸಿದ ಎಲ್ಲ ರೋಗಗಳನ್ನು ನಿವಾರಿಸುತ್ತದೆ ಯಕೃತ್ ಅಥವಾ ಲಿವ್ಹರ್ ಗಳಿಗೆ ಸಂಬಂಧಿಸಿದ ಎಲ್ಲ ರೋಗಗಳಿಗೆ ರಾಮಬಾಣ ವಾಗಿದೆ.
ಕಫರೋಗ, ಪಾಂಡುರೋಗ, ಕವಿ ಸೋರುವಿಕೆ, ಪ್ರಸೂತಿರೋ ಗ ಅರ್ಜೀಣಜ್ವರ, ಮೂತ್ರಕೃಚ್ಛ್ರ, ಹಾಗೂ ಕಣ್ಣುರೋಗಗಳಿಗೆ ಗೋಮೂತ್ರದ ಚಿಕಿತ್ಸೆಯು ಅತಿ ಲಾಭದಾಯಕವಾಗಿದೆ.
  ಹೊಲಗಳಲ್ಲಿ ಅಥವಾ ತೋಟದ ಗಿಡಗಳಿಗೆ ಕ್ರಿಮಿನಾಶಕಗಳನ್ನು (prestiside) ಸಿಂಪಡಿಸುವ ಬದಲು ಗೋಮೂತ್ರವನ್ನು ಸಿಂಪಡಿಸಿದರೆ ಸಸ್ಯಗಳು ಹಾಗೂ ಗಿಡ-ಮರಗಳು ಕ್ರಿಮಿಮುಕ್ತವಾಗುತ್ತವೆ.
ಗೋಮಯ:-- ಇದು ಶಕ್ತಿಪೂರ್ಣ ಕ್ರಿಮಿನಾಶಕವಾಗಿದೆ.ಕ್ಷಯ ಮೈಲಿಬೇನೆ (small pox) ಹಾಗೂ ಕಾಲರ ರೋಗಗಳ ಜಂತುಗಳನ್ನು ನಾಶಪಡಿಸಿ ಆ ರೋಗಗಳ ಹಬ್ಬುವಿಕೆಯನ್ನು ತಡೆಯುತ್ತದೆ.
Dr.Edwerd Jenner. ಎಂಬುವನು ಗೋಮಯದಿಂದ ತನಗೆ ತನ್ನ ಸೇವಕರಿಗೆ smallpox. ರೋಗದ ಸೋಂಕು ಆಗದಂತೆ ನೋಡಿಕೊಂಡು ಅನೇಕ ರೋಗಿಗಳ ರೋಗವನ್ನು ದೂರ ಮಾಡುವುದಲ್ಲದೇ ಈ ಮೈಲಿಬೇನೆ (smallpox)  ರೋಗವು ಆಗಬಾರದಂತೆ ಶರೀರದಲ್ಲಿ ರೋಗಪ್ರತಿರೋಧಕ ಶಕ್ತಿಯನ್ನು (immunity) ಬೆಳೆಸುವ ಔಷಧಿಯನ್ನು ಹಸುವಿನ ಶರೀರದಿಂದ ತಯಾರಿಸಿ ಜಗತ್ತಿಗೆ ಉಪಕಾರವನ್ನು ಮಾಡಿರುವನು
  ಗೋಮಯದಿಂದ ಸಾರಿಸಿದ ನೆಲದಲ್ಲಿ ಗೋಮಯ ಲೇಪಿಸಿದ ಮನೆಯಲ್ಲಿ ವೈರಸ್ ಗಳು ಜೀವಿತವಾಗಿ ಉಳಿಯುವುದಿಲ್ಲ ಅಲ್ಲಿರುವ ವ್ಯಕ್ತಿಗಳಿಗೆ ಕ್ಷಯ ಹಾಗೂ ಮೈಲಿಬೇನೆ ಸೋಂಕು ಆಗುವುದಿಲ್ಲ.
"ಇಟಲಿ " ದೇಶದಲ್ಲಿ ಇಂದಿಗೂ ಬೇಸಿಗೆಯ ಕೊನೆಯಲ್ಲಿ ಹಾಗೂ ಮಳೆಗಾಲದ ಆರಂಭದಲ್ಲಿ "ಕಾಲರ" ರೋಗವು ಹಬ್ಬಬಾರದೆಂದು ನೀರಿನಲ್ಲಿ "ಗೋಮಯ"ದ ಮಿಶ್ರಣವನ್ನು ಕೂಡಿಸುತ್ತಾರೆ.
ಎಲ್ಲ ರೋಗಗಳ ನಿವಾರಣೆಗಾಗಿ.ನಮ್ಮ ಪ್ರಾಚೀನ ಋಷಿಮುನಿಗಳು--
ಅಗ್ರಮಗ್ರಂ ಚರಂತೀನಾಂ ಓಷಧೀನಾಂ ವನೇ ವನೇ|
ತಾಸಾಂ ಋಷಭಪತ್ನೀನಾಂ ಪವಿತ್ರಂ ಕಾಯಶೋಧನಮ್||
ತನ್ಮೇ ರೋಗಾಂಶ್ಚ ಶೋಕಾಂಶ್ಚ ನುದ ಗೋಮಯ ಸರ್ವದಾ|
   ಎಂಬ ಮಂತ್ರ ಹೇಳಿ.ಗೋಮ ಯದಲ್ಲಿ ವಾಸಿಸಿರುವ ಮಹಾಲಕ್ಷ್ಮೀದೇವಿಯ ಸನ್ನಿಧಾ ನ ವನ್ನು ಸ್ಮರಿಸಿ, ಮೈಗೆಲ್ಲ ಗೋಮಯವನ್ನು ಲೇಪಿಸಿ ಕೊಂಡು ಅನಂತರ ಸ್ನಾನ.ಮಾಡುತ್ತಿದ್ದರು..
  ಈ ಬಗ್ಗೆ ನ್ಯೂಯಾರ್ಕ ಟೈಮ್ಸ್  ನಲ್ಲಿ ೧೯೮೪ ರಲ್ಲಿ ಡಾ|| ಮೈಕ್ ಫರ್ಸನ್ ರ ವಿಸ್ತೃತ ಸಂಶೋಧನಾತ್ಮಕ ಲೇಖವನ್ನು ಓದಿರಿ.ಎಂದು ಹಿಂದಿ ಭಾಷೆಯ "ಕಲ್ಯಾಣ" ಮಾಸಿಕವು ಸೂಚಿಸಿದೆ.
ಗೋದುಗ್ದ (ಹಸುವಿನ ಹಾಲು):--
ಇದು ಸ್ವಾಧಿಷ್ಟ, ಸ್ನಿಗ್ಧ, ಬಲಕಾರಕ ಅತಿಪಥ್ಯ ಕಾಂತಿ- ಬುದ್ದಿ-ಪ್ರಜ್ಞಾ ಹಾಗೂ ಮೇದಾವರ್ಧಕವಾಗಿದೆ.ತುಷ್ಟಿ-ಪುಷ್ಟಿ ಹಾಗೂ ವೀರ್ಯದಾಯಕವಾಗಿದೆ.
  ಹುಟ್ಟಿದ ಮಗುವಿಗೆ ತಾಯಿಯ ಹಾಲು ಕಡಿಮೆ ಬೀಳುತ್ತಿದ್ದರೆ ಹಸುವಿನ ಹಾಲನ್ನೂ ಪರ್ಯಾಯವಾಗಿ ಜಗತ್ತಿನ ಎಲ್ಲ ಕಡೆಗಳಲ್ಲಿ ಚಿಕ್ಕ ಮಕ್ಕಳಿಗೆ ಕುಡಿಸಲಾಗುತ್ತದೆ.
  ಅರ್ಧತೆಲೆನೋವು ಅನ್ನವಿಷಭಾದೆ (food poison)  ಅಜೀರ್ಣ, ಕಫರೋಗ ಅಜೀರ್ಣಜ್ವರ ಮೂತ್ರಕೃಚ್ಛ್ರ ಹೃದಯರೋಗ, ಶಿರೋವೇದನೆ, ಪಾಂಡುರೋಗ, ಕ್ಷಯರೋಗ ಸಂಗ್ರಹಿಣಿ ಇತ್ಯಾದಿ ರೋಗಗಳಲ್ಲಿ ರೋಗಶಾಮಕ ಶ್ರೇಷ್ಠ ಔಷಧಿ ಯಾಗಿದೆ.
⚜ಶ್ರೀಗೋಪಾಲ ಕೃಷ್ಣಾ⚜

-ಕೃಪೆ :- WhatsApp
ಪಂಚಗವ್ಯ ಏಕೆ? Reviewed by Unknown on 10:53:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.