New Posts

recent

ಹೃದಯಬಾಂದಳ


ಹೃದಯಬಾಂದಳ

ಮನದ ಮರುಳ ಕರಗಿಸಯ್ಯ ಬಾಲರಾಮನೆ
ಭವದ ಕಿಚ್ಚ ಆರಿಸಯ್ಯ ಮುದ್ದುರಾಮನೆ ॥

ಎನ್ನ ಅಶನ ವಸನಕೆಲ್ಲ ನೀನೆ ಬಂಧುವು
ಗರವನೆಲ್ಲ ನಗರಗೊಳಿಸೆ ನಿನ್ನ ನಾಮವು
ಜಗದ ಸೊಗಕೆ ನೀನೆ ತಾನೆ ಅಭಯದಾಯಕ
ನಿನ್ನ ಸೇವೆಗಾಗಿ ಬಂದೆ ನಾನೇ ಸೇವಕ ॥

ಜಾತಿಯುಸಿರ ಅಳಿಸಿಹಾಕು ಮೂಲದಿಂದಲೆ
ಕ್ಷಣಿಕ ಮೋಹ ಹೊಸಕಿ ನೂಕು ಹೃದಯದಿಂದಲೆ
ನಿನ್ನನಾಮ ಭಜಿಪುವಂತೆ ದಾರಿ ತೋರಿಸು
ಮನದ ಮುಸುಕು ಸರಿಯುವಂತೆ ನೀನೆ ಕರುಣಿಸು ॥

ನಿನ್ನ ಬದುಕೆ ಎನ್ನ ಬಾಳು ಲೋಕನಯನಕೆ
ನಾನೆ ನೀನು ನಿನ್ನೊಳಾನು ಭವ್ಯ ಬಕುತಿಗೆ
ಗುರುವೆ ನೀಡು ಮಮತೆ ಅರಿವ ಮುದ್ದು ಕಂಗಳ
ಪ್ರೀತಿ ಸೊಗಡು ಪಸರುವಂತ ಭವ್ಯ ಬಾಂದಳ ॥

~RSB
ಹೃದಯಬಾಂದಳ Reviewed by Unknown on 04:15:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.