ಶ್ರೀಕೃಷ್ಣಾಷ್ಟಮಿ - ಆನಂದದ ಯುಗ ಜಗಕವತರಿಸಲಿ! ಗೋವಿಂದ
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ
ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳವರ
ಗೋಚಾತುರ್ಮಾಸ್ಯ
ಶ್ರೀಕೃಷ್ಣಾಷ್ಟಮಿ
ಶ್ರೀಮಜ್ಜಗದ್ಗುರುಶಂಕರಾಚಾರ್ಯ
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಗೋಚಾತುರ್ಮಾಸ್ಯ ಕಾರ್ಯಕ್ರಮವು ಶ್ರೀರಾಮಚಂದ್ರಾಪುರಮಠದ
ಬೆಂಗಳೂರಿನ ಶಾಖಾಮಠದಲ್ಲಿ 'ಆನಂದದ ಯುಗ ಜಗಕವತರಿಸಲಿ! ಗೋವಿಂದ!' ಎಂಬ ಹಿನ್ನೆಲೆಯಲ್ಲಿ ಆಚರಿತವಾಗುತ್ತಿದ್ದು, ಗೋಚಾತುರ್ಮಾಸ್ಯದ
ಈ ಸುಸಂದರ್ಭದಲ್ಲಿ ಕೃಷ್ಣಾಷ್ಟಮಿಯ ಕಾರ್ಯಕ್ರಮವನ್ನು ವಿಶೇಷವಾಗಿ ವಿವಿಧ ಕಾರ್ಯಕ್ರಮ
ವೈವಿಧ್ಯಗಳೋಂದಿಗೆ ಆಚರಿಸಲಾಯಿತು.
ಮಾತೆಯರಿಂದ
ಮೊಸರು ಕಡೆಯುವುದು, ಕೃಷ್ಣವೇಷದಾರಿ ಮುದ್ದು ಮಕ್ಕಳಿಗೆ ಬೆಣ್ಣೆಯನ್ನು ತಿನ್ನಿಸುವುದು, ರಾಧಾ – ಯಶೋಧ
ಎಂಬ ವಿನೂತನ ಆಟ, ಕೋಲಾಟ ಸೇರಿದ ಭಕ್ತರ ಮನಸ್ಸಿಗೆ ಮುದನೀಡಿದರೆ, ಬಾಳೆಕೊನೆಯಿಂದ ಹಣ್ಣೀನ್ನು ಕೀಳುವುದು,
ಮೊಸರು ಗಡಿಗೆ ಒಡೆಯುವುದು ಇತ್ಯಾದಿ ಕಾರ್ಯಕ್ರಮಗಳು ಬಾಲ ಕೃಷ್ಣನ ಲೀಲೆಯನ್ನು ನೆನಪಿಸಿತು. ಶ್ರೀಕೃಷ್ಣನ
ಕುರಿತಾದ ರಸಪ್ರಶ್ನೆ ಕಾರ್ಯಕ್ರಮ ಶ್ರೀಕೃಷ್ಣನ ಜೀವನವನ್ನು ಪುನರ್ಮನನ ಮಾಡಿಕೊಟ್ಟಿತು.
ಸಭೆಯಲ್ಲಿ
ದಿವ್ಯಸಾನ್ನಿಧ್ಯವಹಿಸಿದ್ದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಸಾಧನಾ ಪಂಚಕ ಪ್ರವಚನದ ದೃಶ್ಯಮುದ್ರಿಕೆ
ಹಾಗೂ ಶ್ರೀಭಾರತೀ ಪ್ರಕಾಶನ ಹೊರತಂದಿರುವ ಡಾ. ರವಿ ಪಾಂಡವಪುರ ಅವರು ರಚಿಸಿದ ‘ಗವ್ಯಾಮೃತ’ ಎಂಬ ಪುಸ್ತಕವನ್ನುಲೋಕಾರ್ಪಣಗೊಳಿಸಿದರು.
ಈ ಕೃತಿಯು ಶ್ರೀಮಠದ ಸಾಹಿತ್ಯಸುರಭಿ ವಿಭಾಗ ಕೊಡುಗೆಯಾಗಿದೆ. ಸಭೆಯಲ್ಲಿ ಖ್ಯಾತ ಗಾಯಕರಾದ ಗರ್ತೀಕೆರೆ
ರಾಘಣ್ಣ ಮುಂತಾದವರು ಉಪಸ್ಥಿತರಿದ್ದರು.
ಕೃಷ್ಣಾಷ್ಟಮಿಯ
ಪ್ರಯುಕ್ತ ರಾತ್ರಿ 9.00 ಗಂಟೆಯಿಂದ ವಿಶೇಷವಾಗಿ ಗೋವರ್ಧನ ಗಿರಿಧಾರಿ ಗೋಕಥಾ ನಡೆಯಲಿದ್ದು, ಆನಂತರ
ಕೃಷ್ಣಜನನ ಸಮಯದಲ್ಲಿ ಕೃಷ್ಣಜನ್ಮೋತ್ಸವ ಕಾರ್ಯಕ್ರಮ ಸಂಪನ್ನವಾಗಲಿದ್ದು, ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ನಡೆಯಿತು.
ಶ್ರೀಕೃಷ್ಣಾಷ್ಟಮಿ - ಆನಂದದ ಯುಗ ಜಗಕವತರಿಸಲಿ! ಗೋವಿಂದ
Reviewed by Unknown
on
07:03:00
Rating:

No comments: