ಕೃಷಿ ಯಾಂತ್ರೀಕರಣದತ್ತ ಒಂದು ಚಿತ್ತ
ಪರಶುರಾಮ ಸೃಷ್ಟಿಯೆಂದೇ ಚಿರಪರಿಚಿತವಾದ ಕರ್ನಾಟಕದ ಕರಾವಳಿ ಜಿಲ್ಲೆಗಳು. ಭತ್ತ, ಅಡಿಕೆ, ತೆಂಗು ಮತ್ತು ಇತರ ಕೃಷಿ ಕಾರ್ಯಗಳು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಇಲ್ಲಿನ ಜನರಿಗೆ ಗಳಿಕೆಯ ದಾರಿಯಾಗಿದೆ. ಇನ್ನು ವಿದ್ಯಾಭ್ಯಾಸದ ವಿಷಯದಲ್ಲಂತೂ ಇಡೀ ದೇಶದಲ್ಲೇ ಹೆಸರುವಾಸಿ.
ತನ್ನೂರಿನ ಸಂಸ್ಥೆಗಳಲ್ಲಿ ವಿದ್ಯಾರ್ಜನೆಗೈಯುವ ಅನೇಕ ಮಕ್ಕಳು ಮತ್ತು ದೇಶದೆಲ್ಲೆಡೆ ಅನೇಕ ವಿದ್ಯಾ ಕೇಂದ್ರಗಳಲ್ಲಿ ಕಲಿಯುವ ಯುವಕರು, ತಮ್ಮೂರಿನ ಹೆಸರನ್ನು ಜಗತ್ತಿನೆಲ್ಲೆಡೆ ಹರಡುತ್ತಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆಯನ್ನು ನೀಡಿ, ತನ್ನವರ ಏಳ್ಗೆಗೆ ಶ್ರಮಿಸುತ್ತಿದ್ದಾರೆ.
ಇತ್ತೇಚಿನ ದಿನಗಳಲ್ಲಂತೂ ವಿಜ್ಞಾನ ಮತ್ತು ತಂತ್ರಜ್ಞಾನದ (BSc, ITI,Diploma, Engineering) ಪದವೀದರರ ಸಂಖ್ಯೆಯಂತೂ ಅಗಾಧವಾಗಿ ಬೆಳೆಯುತ್ತಿದೆ. ಜೊತೆಗೆ ನಿರುದ್ಯೋಗ ಎಂಬ ಸಮಸ್ಯೆ ತನ್ನ ಕರಾಳ ಹಸ್ತವನ್ನ ಚಾಚುತ್ತಿದೆ.
ಆದರೆ ಮುಖ್ಯವಾಗಿ ನಿರುದ್ಯೋಗ ಅನ್ನುವುದಕ್ಕಿಂತ, ಪ್ರತಿಭೆಗೆ ತಕ್ಕ ಪ್ರತಿಫಲವಾಗಿ ತಿಂಗಳ ಕೊನೆಗೆ ಸಂಬಳ ದೊರಯುತ್ತಿಲ್ಲ ಅನ್ನೋದು ಅನೇಕರ ದೂರು. ಲಕ್ಷಗಟ್ಟಲೆ ಖರ್ಚು ಮಾಡಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿ ಬೆಂಗಳೂರಿನಂತಹ ಮಹಾನಗರದಲ್ಲಿ ನಾಲ್ಕಂಕಿಯ ವೇತನಕ್ಕೆ ದುಡಿಯುವ ಪರಿಸ್ಥಿತಿ ಬಂದಿದೆ. ಇನ್ನೊಂದೆಡೆ ಕೃಷಿ ಕಾರ್ಯಗಳಿಗೆ ಮಾನವ ಸಂಪನ್ಮೂಲದ ಅಭಾವದಿಂದ ಕೈಚೆಲ್ಲಿ ಕುಳಿತಿರುವ ಊರಿನ ಜನರು.
ಹೌದು, ಇಂದು ಹೆಚ್ಚಾಗಿ ಕೃಷಿ ಕ್ಷೇತ್ರ ಮಾನವ ಸಂಪನ್ಮೂಲದ ಕೊರತೆಯನ್ನು ಎದುರಿಸುತ್ತಿದೆ. ತೋಟದ ಕೆಲಸಕ್ಕೆ ಕೆಲಸಗಾರರನ್ನ ಹುಡುಕಿಕೊಂಡು ಅವರ ಮನೆ ಬಾಗಿಲನ್ನ ತಟ್ಟುವ ಪರಿಸ್ಥಿತಿ ಬಂದಿದೆ. ಇನ್ನು ಮರ ಏರುವಂತಹ ನಾಜೂಕಿನ ಕೆಲಸಗಾರರ ಸಂಖ್ಯೆಯಂತೂ ವಿರಳವಾಗಿದೆ. ಇನ್ನೊಂದು ವಿಪರ್ಯಾಸವೆಂದರೆ, ಮನೆಯಲ್ಲೇ ಮಾನವ ಸಂಪನ್ಮೂಲದ ಲಭ್ಯತೆ ಇದ್ದರೂ, ಬೇರೆ ಕೆಲಸಗಾರರನ್ನ ಹುಡುಕುವ ಪರಿಸ್ಥಿತಿ.
ಕೆಲವು ಸಮಯದ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಬೇಕಾದಷ್ಟು ಕೆಲಸಗಾರರ ಲಭ್ಯತೆ ಇದ್ದಾಗ ಮನೆಯ ಮಗನಿಗೆ ಮರ ಏರುವುದನ್ನು , ಅಡಿಕೆ ಸುಲಿಯುವುದನ್ನು, ಮಗಳಿಗೆ ಹಾಲು ಕರೆಯುವುದನ್ನು ಕಲಿಸಬೇಕು ಅನ್ನೋ ಮನಸ್ಥಿತಿ ಹೆಚ್ಚಿನ ಪೋಷಕರಲ್ಲಿ ಇರಲಿಲ್ಲ. ನಿಸರ್ಗದೊಂದಿಗೆ ಬೆಳೆಯಬೇಕಾದ ಮಕ್ಕಳನ್ನ ನಾಲ್ಕು ಗೋಡೆಗಳ ನಡುವೆ ಕೂರಿಸಿ, ಪರೀಕ್ಷೆಯಲ್ಲಿ ಅಂಕಗಳಿಸುವುದೊಂದೆ ನಿನ್ನ ಜೀವನದ ಪರಮ ಗುರಿ ಎಂಬಂತೆ ಮಕ್ಕಳ ಮನಸಲ್ಲಿ ಮುದ್ರೆಯೊತ್ತುತ್ತಿದ್ದರು. 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ' ಎಂಬಂತೆ ಕೃಷಿಯ ಕೆಲಸಗಳ ಅರಿವೇ ಇಲ್ಲದ ಯುವಕರು, ಅದರಿಂದ ವಿಮುಖರಾಗುತ್ತಿದ್ದಾರೆ. ತನಗೆ ದೊರೆಯದ ಉನ್ನತ ವಿದ್ಯಾಭ್ಯಾಸ ತನ್ನ ಮಕ್ಕಳಿಗೆ ದೊರೆಯಲಿ ಎಂಬ ಕಾಳಜಿಯಲ್ಲಿ, ಹೆತ್ತವರು ತಮಗೆ ಹಿರಿಯರಿಂದ ದೊರೆತ ಕೃಷಿಯ ಪಾಠವನ್ನ ಮುಂದಿನ ತಲೆಮಾರಿಗೆ ನೀಡಬೇಕು ಅನ್ನುವ ವಿಷಯವನ್ನ ಮರೆತಿದ್ದಾರೆ. ಅದರ ಪರಿಣಾಮವನ್ನ ಈಗ ಎದುರಿಸಬೇಕಾಗಿದೆ.
ಕೃಷಿಯ ಯಾಂತ್ರೀಕರಣ ಈ ಸಮಸ್ಯೆಗೆ ತಕ್ಕ ಮಟ್ಟಿನ ಪರಿಹಾರವನ್ನು ನೀಡಬಲ್ಲದು. ಅದರ ಅನ್ವೇಷಣೆಗೆ ಬೇಕಾದ ಮಾನವ ಸಂಪನ್ಮೂಲ ಕೂಡ ನಮ್ಮ ಬಳಿಯೇ ಇದೆ.
ಕಳೆದ ವಾರ ಒಂದು ಬಹುರಾಷ್ಟೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಕೃಷಿ ಕುಟುಂಬದ ಹಿನ್ನೆಲೆಯ ಮೆಕಾನಿಕಲ್ ಎಂಜಿನಿಯರ್ ಬಳಿ ಈ ವಿಷಯದ ಬಗ್ಗೆ ಕೇಳಿದಾಗ, ಅವರ ಉತ್ತರ ಹೀಗಿತ್ತು.
" ನಾನು ಕೂಡ ಕೃಷಿಕನ ಮಗನಾಗಿ, ಅದರ ಸಮಸ್ಯೆಗಳನ್ನು ಹತ್ತಿರದಿಂದ ಕಂಡವನು.
ಕೃಷಿಕರ ಸಮಸ್ಯೆಗಳಿಗೆ ಯಂತ್ರೋಪಕರಣಗಳ ಸಂಶೋಧನೆಗೆ ಹೊರಟ ನನಗೆ, ಖರ್ಚುವೆಚ್ಚ ಒಂದೆಡೆಯಾದರೆ , ಕುಟುಂಬದ ನಿರ್ವಹಣೆಯ ಹಣಕಾಸಿನ ಪರಿಸ್ಥಿತಿ.
ಇದರಿಂದ ಬೇಸತ್ತ ನಾನು ಈ ಕೆಲಸಕ್ಕೆ ಸೇರಿಕೊಂಡೆ" ಅಂತಾರೆ.
ಅವರ ಅಭಿಪ್ರಾಯದಂತೆ, ಕೃಷಿ ಯಂತ್ರೋಪಕರಣಗಳ ಸಂಶೋಧನೆಗೆ ಇಳಿದ ಅನೇಕರು, ಸರಿಯಾದ ಪ್ರೋತ್ಸಾಹವಿಲ್ಲದೆ ಅರ್ಧದಲ್ಲಿಯೇ ತಮ್ಮ ಕಾರ್ಯವನ್ನ ನಿಲ್ಲಿಸಿದ್ದಾರೆ.
ಹೌದು, ಕೃಷಿ ಯಂತ್ರೋಪಕರಣಗಳ ಸಂಶೋಧನೆಗೆ ತೊಡಗುವ ಪ್ರತಿಭಾವಂತರಿಗೆ ಒಂದಷ್ಟು ಧನ ಸಹಾಯ ಮತ್ತು ಪ್ರೋತ್ಸಾಹ ಒದಗಿದರೆ ಅವರಿಂದ ಉತ್ಕೃಷ್ಟ ಪ್ರತಿಫಲವನ್ನು ನಿರೀಕ್ಷಿಸಬಹುದು. ವಿವಿಧ ರೀತಿಯ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಕೃಷಿಕರು, ಸರ್ಕಾರಿ ಸಂಸ್ಥೆಗಳ ಮರ್ಜಿಗೆ ಬೀಳದೆ ತಮ್ಮದೇ ಆದ ಒಂದು ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿ, ತನ್ನೂರಿನ ಆಸಕ್ತರನ್ನು ಸಂಶೋಧನೆಗೆ ಪ್ರೇರೇಪಿಸಬಹುದು. ಕೃಷಿಕರೆಲ್ಲಾ ತಮ್ಮ ಗಳಿಕೆಯ ಒಂದಷ್ಟು ಪಾಲನ್ನು ಈ ಸಂಸ್ಥೆಗೆ ವಿನಿಯೋಗಿಸಿದಲ್ಲಿ ಖಂಡಿತವಾಗಿಯೂ ಕೃಷಿ ಹಾಗು ನಿರುದ್ಯೋಗದ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು.
ಆ ಮೂಲಕ ತನ್ನೂರಲ್ಲೆ ನೆಲೆ ನಿಂತು, ತನ್ನವರ ಕಷ್ಟಗಳ ನಿವಾರಣೆಯ ಕನಸು ಕಾಣುತ್ತಿರುವ ಅನೇಕ ಪ್ರತಿಭಾವಂತ ಯುವಕರ ಕನಸನ್ನು ನನಸಾಗಿಸಬಹುದು.

Reviewed by Murali Kadava
on
08:08:00
Rating:

No comments: