New Posts

recent

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ

ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಆಶಯದಂತೆ 'ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ'  ಎಂಬ ಉದ್ದೇಶದೊಂದಿಗೆ ಸಾಮಾಜಿಕ ಸೇವಾ ಸಂಘಟನೆಯಾದ 'ರಾಘವ ಸೇನೆ'ಯ ವತಿಯಿಂದ ಸ್ವಚ್ಚತಾ ಅಭಿಯಾನ ನಡೆಯಿತು. ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ  ಗಿರಿನಗರದ ಪರಿಸರದಲ್ಲಿ  ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಚಗೊಳಿಸಲಾಯಿತು. 

ರಸ್ತೆಯ ಬದಿಯಲ್ಲಿ ಸಂಚರಿಸುವ ಗೋವುಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು, ತಮ್ಮ ಜೀವನವನ್ನು ಕಳೆದು ಕೊಳ್ಳುತ್ತಲಿವೆ. ಈ ಪ್ಲಾಸ್ಟಿಕ್ ಸಮಸ್ಯೆ ಯಿಂದ ಗೋ ಪರಿವಾರವನ್ನು ರಕ್ಷಿಸಲು ಈ ಚಾತುರ್ಮಾಸ್ಯವನ್ನು ವಿಶೇಷವಾಗಿ ಗೋವಿನ ಕುರಿತಾಗಿಯೇ ಆಚರಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಕಳಕಳಿಯನ್ನು ಹೋಂದಿದ್ದು, ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸುವ ಬೃಹತ್ ಚಿಂತನೆಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 'ರಾಘವ ಸೇನೆಯ' ಕಾರ್ಯಕರ್ತರು ಈ ಸ್ವಚ್ಚತಾ ಅಭಿಯಾನವನ್ನು ಕೈಗೊಂಡರು.

ಸ್ವಚ್ಚತಾ ಅಭಿಯಾನಕ್ಕೆ ಬಿವಿಜಿ ಗ್ರೂಪಿನ ಪ್ರಸನ್ನ ಶಾಸ್ತ್ರಿ ಸ್ವಚ್ಚತಾ ಪರಿಕರಗಳನ್ನು ನೀಡುವ ಮೂಲಕ ಚಾಲನೆ ನೀಡಿದರು, ಕಾರ್ಯಕ್ರಮದಲ್ಲಿ ಡಾ. ವೈ ವಿ ಕೃಷ್ಣಮೂರ್ತಿ, ರಾಮಚಂದ್ರ ಭಟ್ ಕೆಕ್ಕಾರು, ಡಾ ಶಾರದಾ ಜಯಗೋವಿಂದ, ರಾಘವಸೇನೆಯ ಆರ್ ಕೆ ಭಟ್ ಬೆಳ್ಳಾರೆ ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಇದ್ದರು.




ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ Reviewed by Unknown on 09:14:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.