ಸಂತರಿಂದ ಮಾತ್ರ ಪರಿವರ್ತನೆ ಸಾಧ್ಯ
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ
ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳವರ
ಗೋಚಾತುರ್ಮಾಸ್ಯ
ಸಂತರಿಂದ ಮಾತ್ರ ಪರಿವರ್ತನೆ ಸಾಧ್ಯ
ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳ ಚಾತುರ್ಮಾಸ್ಯ ಸಂದೇಶ
ಬೆಂಗಳೂರು : ಸರ್ಕಾರಗಳಿಂದ ಬದಲಾವಣೆ ಸಾಧ್ಯವಿಲ್ಲ, ಸಂತರಿಂದ ಮಾತ್ರ ಪರಿವರ್ತನೆ ಸಾಧ್ಯ. ಗೋ ಪ್ರೇಮಾಧಾರಿತವಾಗಿ ದೇಶವನ್ನು ಕಟ್ಟಬೇಕಾಗಿದ್ದು, ಗೋವನ್ನು ಪ್ರೀತಿಯಿಂದ ನೋಡುವ ದಿನಗಳು ಬರಬೇಕಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಆಶಿಸಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಬದುಕುವ ಹಕ್ಕು ಎಲ್ಲಾ ಜೀವಿಗಳಿಗೂ ಇದೆ, ಭಗವಂತ
ನೀಡಿದ ಬದುಕನ್ನು ಮುಕ್ತಾಯಗೊಳಿಸುವ ಹಕ್ಕು ಯಾರಿಗೂ ಇಲ್ಲ. ಗೋವು ನಮ್ಮಿಂದ ನಿರೀಕ್ಷಿಸುವುದು ಸಹಜವಾದ
ಹುಟ್ಟು, ಸಹಜವಾದ ಬದುಕು ಹಾಗೂ ಸಹಜವಾದ ಮರಣವನ್ನು ಮಾತ್ರ ಎಂದು ಮಾರ್ಮಿಕವಾಗಿ ಹೇಳಿದರು.
ಹಾಲು, ಗೋಮೂತ್ರ ಹಾಗೂ ಗೋಮಯದಲ್ಲಿ ಎಲ್ಲವೂ
ಇದೆ, ಇವುಗಳಿಂದ ಸುಖಜೀವನ ಸಾಧ್ಯ. ಗೋವಿನಿಂದ ಭೂಮಿಯೇ ಹಸನಾಗುತ್ತದೆ, ನಮ್ಮ ಜೀವನ ಹಸನಾಗುವುದಿಲ್ಲವೇ
ಎಂದು ಪ್ರಶ್ನಿಸಿದ ಶ್ರೀಗಳು, 2020ನೇ ಇಸುವಿಯ ವೇಳೆಗೆ ಇಂದಿನ ಎಲ್ಲಾ ರೋಗನಿರೋಧಕಗಳೂ ನಿಷ್ಕ್ರಿಯವಾಗುತ್ತದೆ
ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ, ಅಂತಹ ಸಂದರ್ಭ ಉಂಟಾದಾಗ ರೋಗನಿರೋಧಕ ಶಕ್ತಿಯನ್ನು
ಹೊಂದಿರುವ ಗೋಮೂತ್ರ ಪ್ರಪಂಚದ ಪಾಲಿಗೆ ಆಶಾಕಿರಣವಾಗುತ್ತದೆ ಎಂದರು.
ಕಾಗಿನೆಲೆ
ಪೀಠ ಹೊಸದುರ್ಗ ಶಾಖೆಯ ಶ್ರೀ ಈಶ್ವರಾನಂದ ಪುರಿ ಸ್ವಾಮಿಜಿ ಸಂತಸಂದೇಶ ನೀಡಿ, ಗೋಸೇವೆಯಿಂದಾಗಿ ನಾವು
ಸಂನ್ಯಾಸ ಸ್ವೀಕರಿಸುವಂತಾಯಿತು. ಪರೋಪಕಾರಿಯಾದ ಗೋವನ್ನು ರಕ್ಷಿಸುವ ಹೊಣೆ ಎಲ್ಲರಿಗೂ ಇದ್ದು. ರಾಘವೇಶ್ವರ
ಶ್ರೀಗಳು ಎಲ್ಲಾ ಯುವ ಸನ್ಯಾಸಿಗಳಿಗೆ ಸ್ಪೂರ್ತಿಯಾಗಿದ್ದು, ಅವರ ಗೋಸಂರಕ್ಷಣಾ ಕಾರ್ಯದಲ್ಲಿ ಎಲ್ಲರೂ
ತೊಡಗಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಗೋಸೇವೆಯಲ್ಲಿ
ತೊಡಗಿಸಿಕೊಂಡಿರುವ ಹಾಗೂ ಪಾರಂಪರಿಕ ಗೋವೈದ್ಯರಾದ ಜೀವನ್ ಕುಮಾರ್ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಗೋವುಗಳೋಂದಿಗೆ
ತಮ್ಮ ಒಡನಾಟವನ್ನು ಹಂಚಿಕೊಂಡರು. ಶ್ರೀಭಾರತೀಪ್ರಕಾಶನವು ಹೊರತಂದ ಕಥಾಗೀತೆ
ದೃಶ್ಯಮುದ್ರಿಕೆಯನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಕಾಗಿನೆಲೆ
ಪೀಠದ ಶ್ರೀ ಈಶ್ವರಾನಂದ ಪುರಿ ಸ್ವಾಮಿಜಿ ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಭಾನುಸಿಂಹ
ಹಾಗು ಸಂಗಡಿಗರಿಂದ ದಾಸರ ಪದ ಕಾರ್ಯಕ್ರಮ ನಡೆಯಿತು.
ಕಥಾಗೀತೆ
ದೃಶ್ಯಮುದ್ರಿಕೆಯ ಗಾಯಕರಾದ ಹಿರಿಯ ಹಿಂದುಸ್ತಾನಿ ಗಾಯಕರಾದ ಗರ್ತಿಕೆರೆ ರಾಘಣ್ಣ ಶ್ರೀಗಳಿಂದ ಆಶೀರ್ವಾದ ಪಡೆದರು. ಕೃಷ್ಣಾನಂದ
ಶರ್ಮಾ ಹಾಗೂ ರಮ್ಯಾ ಸುರೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
2020ನೇ ಇಸುವಿಯ ವೇಳೆಗೆ ಇಂದಿನ ಎಲ್ಲಾ ರೋಗನಿರೋಧಕಗಳೂ ನಿಷ್ಕ್ರಿಯವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ, ಅಂತಹ ಸಂದರ್ಭ ಉಂಟಾದಾಗ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಗೋಮೂತ್ರ ಪ್ರಪಂಚದ ಪಾಲಿಗೆ ಆಶಾಕಿರಣವಾಗುತ್ತದೆ ಎಂದರು.
- ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ
ಗೋಸೇವೆಯಿಂದಾಗಿ ನಾವು ಸಂನ್ಯಾಸ ಸ್ವೀಕರಿಸುವಂತಾಯಿತು. ಪರೋಪಕಾರಿಯಾದ ಗೋವನ್ನು ರಕ್ಷಿಸುವ ಹೊಣೆ ಎಲ್ಲರಿಗೂ ಇದ್ದು. ರಾಘವೇಶ್ವರ ಶ್ರೀಗಳು ಎಲ್ಲಾ ಯುವ ಸನ್ಯಾಸಿಗಳಿಗೆ ಸ್ಪೂರ್ತಿಯಾಗಿದ್ದು, ಅವರ ಗೋಸಂರಕ್ಷಣಾ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಿದೆ.- ಕಾಗಿನೆಲೆ ಪೀಠ ಹೊಸದುರ್ಗ ಶಾಖೆಯ ಶ್ರೀ ಈಶ್ವರಾನಂದ ಪುರಿ ಸ್ವಾಮಿಜಿ
ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಚಾತುರ್ಮಾಸ್ಯ ಸಂದೇಶವನ್ನು ರಾಘವೇಶ್ವರ ಶ್ರೀಗಳು ಅನುಗ್ರಹಿಸಿದರು |
ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಪಾರಂಪರಿಕ ಗೋವೈದ್ಯರಾದ ಜೀವನ್ ಕುಮಾರ್ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು |
ಕಾಗಿನೆಲೆ ಪೀಠದ ಶ್ರೀ ಈಶ್ವರಾನಂದ ಪುರಿ ಸ್ವಾಮಿಜಿ ಅವರಿಗೆ ರಾಘವೇಶ್ವರ ಶ್ರೀಗಳು ಸ್ಮರಣಿಕೆ ನೀಡಿದರು. |
ಸಂತರಿಂದ ಮಾತ್ರ ಪರಿವರ್ತನೆ ಸಾಧ್ಯ
Reviewed by Unknown
on
08:23:00
Rating:
No comments: